ಮಹಿಳಾ ಪೊಲೀಸ್ ಮೇಲೆ ಮೂವರಿಂದ ಗ್ಯಾಂಗ್ರೇಪ್ ಮಾಡಿ ವಿಡಿಯೋ ಚಿತ್ರೀಕರಣ!
Sunday, September 26, 2021
ಭೋಪಾಲ್: 30 ವರ್ಷದ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಮೂವರು ಗ್ಯಾಂಗ್ ರೇಪ್ ಎಸಗಿರುವ ಘಟನೆ ಮಧ್ಯಪ್ರದೇಶ ರಾಜ್ಯದ ನೀಮುಚ್ ಜಿಲ್ಲೆಯಲ್ಲಿ ನಡೆದಿದೆ .
ಮೂವರು ಕಾಮುಕರು ಮಹಿಳಾ ಪೊಲೀಸ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು ಮತ್ತು ಈ ಕೃತ್ಯವನ್ನು ವಿಡಿಯೋ ಮಾಡಿದ್ದಾರೆ. ಬಳಿಕ ಮಹಿಳಾ ಪೊಲೀಸ್ ಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.
ಪೊಲೀಸರ ಪ್ರಕಾರ ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ನಡೆದಿದ್ದು ಅತ್ಯಾಚಾರ ಕ್ಕೊಳಗಾದ ಸಂತ್ರಸ್ತೆ ಪೊಲೀಸ್ ಸೆಪ್ಟೆಂಬರ್ 13 ರಂದು ದೂರು ನೀಡಿದ್ದಾರೆ. ಸಂತ್ರಸ್ತೆ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಟ್ಟು 5 ವಿರುದ್ಧ ಪ್ರಕರಣ ದಾಖಲಾಗಿದ್ದು ಪ್ರಮುಖ ಆರೋಪಿಯ ತಾಯಿಯ ಮೇಲೆಯೂ ಪ್ರಕರಣ ದಾಖಲಾಗಿದೆ.
ಪ್ರಮುಖ ಆರೋಪಿ, ಆತನ ಸಹೋದರ ಮತ್ತು ಮತ್ತೊಬ್ಬ ವ್ಯಕ್ತಿ ಸೇರಿ ಒಟ್ಟು ಮೂವರು ಬರ್ತಡೇ ಪಾರ್ಟಿ ವೇಳೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಬಳಿಕ ಪ್ರಮುಖ ಆರೋಪಿಯ ತಾಯಿ ಬೆದರಿಕೆ ಹಾಕಿದ್ದು , ಅವರ ಸಂಬಂಧಿಯೊಬ್ಬರು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿ ಹಣ ಲೂಟಿ ಮಾಡಿದ್ದಾರೆಂದು ಮಹಿಳಾ ಪೊಲೀಸ್ ದೂರಿದ್ದಾರೆ.
ಪ್ರಮುಖ ಆರೋಪಿ Facebook ಮೂಲಕ ಸಂತ್ರಸ್ತ ಮಹಿಳಾ ಪೊಲೀಸನ್ನು ಪರಿಚಯಿಸಿದ್ದ. ಬಳಿಕ ಕಳೆದ ಏಪ್ರಿಲ್ನಿಂದ whatsapp ಮೂಲಕ messege ವಿನಿಮಯ ನಡೆಯುತ್ತಿತ್ತು. ಸಹೋದರನ BIRTHDAY ಆಚರಿಸುತ್ತಿದ್ದೇವೆ ಪಾರ್ಟಿಗೆ ಬನ್ನಿ ಎಂದು ಆಹ್ವಾನಿಸಿದ್ದ. ಆಹ್ವಾನದ ಮೇರೆಗೆ ಪಾರ್ಟಿಗೆ ಹೋದ ಮಹಿಳಾ ಪೊಲೀಸ್ ಮೇಲೆ ಮೂರು ಮಂದಿ ಗ್ಯಾಂಗ್ರೇಪ್ ಮಾಡಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಮತ್ತು ಆತನ ತಾಯಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.