ದಂಪತಿಯ ಟಿಕ್ ಟಾಕ್ ಗೆ ಮರುಳಾಗಿ 44 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ: ಮುಂದೇನಾಯ್ತು ಗೊತ್ತೇ?
Saturday, September 18, 2021
ವಿಜಯವಾಡ: ಟಿಕ್ಟಾಕ್ ವೀಡಿಯೋಗಳಿಂದ ಖ್ಯಾತರಾಗಿರುವ ದಂಪತಿ, ಮಗಳನ್ನು ವಿದೇಶಕ್ಕೆ ಕಳುಹಿಸಲು ಸಹಾಯ ಮಾಡುವ ನೆಪದಲ್ಲಿ 44 ಲಕ್ಷ ರೂ. ವಂಚನೆ ಮಾಡಿದ್ದಾರೆಂದು ಆರೋಪಿಸಿ ವ್ಯಕ್ತಿಯೋರ್ವರು ಪೊಲೀಸ್ ದೂರು ದಾಖಲಿಸಿರುವ ಘಟನೆ ಆಂಧ್ರಪ್ರದೇಶದ ಈಸ್ಟ್ ಗೋದಾವರಿ ಜಿಲ್ಲೆಯ ಗೊಕವರಂನಲ್ಲಿ ನಡೆದಿದೆ.
ಮಾಮಿದಲ ಶ್ರೀಧರ್ ಮತ್ತು ಛೆರುಕುಮಿಲಿ ಗಾಯತ್ರಿ ಆರೋಪಿ ದಂಪತಿಗಳು ಎಂದು ಗುರುತಿಸಲಾಗಿದೆ.
ತಮ್ಮ ಮಗಳನ್ನು ವಿದೇಶಕ್ಕೆ ಕಳುಹಿಸಲು ಸಹಾಯ ಮಾಡುವ ಭರವಸೆಯನ್ನು ನೀಡಿ 44 ಲಕ್ಷ ರೂ. ನಗದು ಪಡೆದು ದಂಪತಿ ವಂಚನೆ ಮಾಡಿದ್ದಾರೆಂದು ಗೌರಿಶಂಕರ್ ದೂರ ಇತ್ತ ಇದ್ದ ಅರೆ.
ದಂಪತಿಯ ಟಿಕ್ಟಾಕ್ ಮಾಡಿಕೊಂಡು ಸ್ಥಳೀಯವಾಗಿ ಪ್ರಸಿದ್ಧರಾಗಿದ್ದಾರೆ. ಈ ಟಿಕ್ ಟಾಕ್ ವೀಡಿಯೋಗಳನ್ನು ನೋಡಿ ಗೌರಿಶಂಕರ್ ಮಾರು ಹೋಗಿದ್ದ. ಅಲ್ಲದೆ ಈ ದಂಪತಿ ಗಣ್ಯ ವ್ಯಕ್ತಿಗಳ ಜತೆಯಲ್ಲಿರುವ ವೀಡಿಯೋವನ್ನು ಸಹ ನೋಡಿ ಅವರ ಅದ್ಧೂರಿತನವನ್ನು ನೋಡಿ ಮರುಳಾಗಿದ್ದ ಗೌರಿಶಂಕರ್ ಸಂಪೂರ್ಣ ನಂಬಿದ್ದ.
ಅಲ್ಲದೆ ಈತ ತನ್ನ ಮಗಳನ್ನು ಖಂಡಿತ ದಂಪತಿ ವಿದೇಶಕ್ಕೆ ಕಳುಹಿಸುಕೊಡುತ್ತಾರೆ ವಿಶ್ವಾಸವನ್ನು ಹೊಂದಿದ್ದ. ಹಾಗಾಗಿ ಅವರಿಗೆ 44 ಲಕ್ಷ ರೂ. ನಗದು ಕೂಡಾ ನೀಡಿದ್ದ.
ಆದರೆ, ಎಷ್ಟು ದಿನವಾದರೂ ದಂಪತಿ ಮಗಳನ್ನು ವಿದೇಶಕ್ಕೆ ಕಳುಹಿಸಿಕೊಡಲಿಲ್ಲ. ಇದರಿಂದ ಅನುಮಾನಗೊಂಡ ಗೌರಿಶಂಕರ್ ತನ್ನ ಹಣವನ್ನು ಹಿಂತಿರುಗಿಸುವಂತೆ ಕೇಳಿದ್ದ. ಹಣ ವಾಪಸ್ ನೀಡುವಂತೆ ಹೇಳಿರುವ ಬೆನ್ನಲ್ಲೇ ದಂಪತಿ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಇದರಿಂದ ಗೌರಿಶಂಕರ್ ಅನುಮಾನ ಮತ್ತಷ್ಟು ಬಲವಾಗಿದೆ.
ಆದ್ದರಿಂದ ವಂಚನೆಗೊಳಗಾದ ವ್ಯಕ್ತಿ ದಂಪತಿ ವಿರುದ್ಧ ಗೊಕವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ತಕ್ಷಣ ಪೊಲೀಸರು ಆರೋಪಿ ದಂಪತಿಯನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿ 15 ದಿನಗಳ ಕಾಲ ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ವಿದೇಶದಲ್ಲಿ ಅಧ್ಯಯನ ಮಾಡಬೇಕೆಂಬ ಆಸೆ ಇಟ್ಟುಕೊಂಡಿರುವ ವಿದ್ಯಾರ್ಥಿಗಳೇ ದಂಪತಿ ಟಾರ್ಗೆಟ್ ಆಗಿದ್ದರು ಎಂದು ತಿಳಿದುಬಂದಿದೆ. ಇದೀಗ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವಂಚನೆಗೊಳಗಾದ ದಂಪತಿ ವಿರುದ್ಧ ಅನೇಕರು ದೂರು ನೀಡಲು ಮುಂದೆ ಬಂದಿದ್ದಾರೆ. ಈ ಬಗ್ಗೆ ರಾಜಮಂಡ್ರಿ ಮತ್ತು ಕಿರ್ಲಾಂಪುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿವೆ.