5 ಪರ್ಸಂಟ್ ಬಡ್ಡಿಗೆ ಲೋನ್ ನಂಬಿ ಪುತ್ತೂರಿನ ವ್ಯಕ್ತಿ ಕಳೆದುಕೊಂಡದ್ದು 7 .24 ಲಕ್ಷ !
ಮಂಗಳೂರು: ಕಡಿಮೆ
ಬಡ್ಡಿಗೆ ಲೋನ್ ಸಿಗುತ್ತದೆ ಎಂದು ಮೊಬೈಲ್ ನಲ್ಲಿ ಬಂದ ಮೆಸೆಜ್ ನಂಬಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ
ವ್ಯಕ್ತಿಯೊಬ್ಬರು ಬರೋಬರಿ 7.24 ಲಕ್ಷ ರೂ ಕಳೆದುಕೊಂಡಿದ್ದಾರೆ.
ಪುತ್ತೂರಿನ
ರಾಮಕುಂಜದ ವ್ಯಕ್ತಿಯ ಮೊಬೈಲ್ ಗೆ capital india finance ltd ಹೆಸರಿನಲ್ಲಿ
ಮೆಸೆಜ್ ವೊಂದು ಬಂದಿದ್ದು ಅದರಲ್ಲಿ 5 ಪರ್ಸಂಟ್ ನಲ್ಲಿ 5 ಲಕ್ಷ ರೂ ಲೋನ್ ನೀಡುವುದಾಗಿ ಹೇಳಲಾಗಿತ್ತು. ಇದನ್ನು ನಂಬಿ ಅದರಲ್ಲಿದ್ದ ನಂಬರ್ ಗೆ ಕರೆ
ಮಾಡಿದಾಗ ಅವರು ಆಧಾರ್ ಕಾರ್ಡ್ , ಪಾನ್ ಕಾರ್ಡ್
, ಬ್ಯಾಂಕ್ ಪಾಸ್ ಬುಕ್ ಮತ್ತು ಪೊಟೋ ಕಳುಹಿಸಲು ಸೂಚಿಸಿದ್ದರು. ಇದನ್ನು ಕಳುಹಿಸಿದ ಬಳಿಕ ವಿವಿಧ ಮೊಬೈಲ್ ಗಳಿಂದ ಕರೆ ಮಾಡಿ ಜಿ ಎಸ್ ಟಿ, ರಿಜಿಷ್ಟ್ರೇಷನ್
ಮತ್ತು ವಿವಿಧ ಶುಲ್ಕ ಎಂದು ರೂ 520727 ನ್ನು ಬ್ಯಾಂಕ್ ಖಾತೆಗೆ ಟ್ರಾನ್ಸ್ ಫರ್ ಮಾಡಿಸಿದ್ದಾರೆ.
ಇದೇ ಸಮಯದಲ್ಲಿ
ಬಜಾಜ್ ಫಿನ್ ಸರ್ವ್ ಎಂಬ ಹೆಸರಿನಲ್ಲಿ ಸಾಲ ನೀಡುವ ಮೆಸೆಜ್ ಕೂಡ ಬಂದಿದ್ದು ಅದರಲ್ಲಿದ್ದ ನಂಬರ್ ಗೆ ಕರೆ ಮಾಡಿದಾಗ 5 ಪರ್ಸಂಟ್ ನಲ್ಲಿ 9 ಲಕ್ಷ ರೂ ಸಾಲ ನಿಡುವುದಾಗಿ ತಿಳಿಸ್ದರು.
ಅವರು ತಿಳಿಸಿದಂತೆ ಆಧಾರ್ ಕಾರ್ಡ್ , ಪಾನ್ ಕಾರ್ಡ್ , ಬ್ಯಾಂಕ್ ಪಾಸ್ ಬುಕ್ ಮತ್ತು ಪೊಟೋ ಕಳುಹಿಸಿದ್ದರು.
ಬಳಿಕ ಜಿ ಎಸ್ ಟಿ, ರಿಜಿಷ್ಟ್ರೇಷನ್ ಮತ್ತು ವಿವಿಧ ಶುಲ್ಕ ಎಂದು 203598 ಟ್ರಾನ್ಸ್ ಫರ್ ಮಾಡಿಸಿದ್ದಾರೆ.
5 ಪರ್ಸಂಟ್ ನ ಲೋನ್ ಆಶೆಯಲ್ಲಿ ಈ ವ್ಯಕ್ತಿ 724325 ಕಳೆದುಕೊಂಡ ಬಳಿಕ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಿಸಿದ್ದಾರೆ