ಗಾಂಧಿಯನ್ನು ಬಿಡಲಿಲ್ಲ, ನಿಮ್ಮನ್ನು ಬಿಡ್ತೇವ ಎಂದು ಬೆದರಿಕೆ ಹಾಕಿದ ಹಿಂದೂ ಮುಖಂಡ ಅರೆಸ್ಟ್!
ಮಂಗಳೂರು: ಹಿಂದೂ ವಿರೋಧಿಯಾಗಿದ್ದ ಗಾಂಧೀಜಿಯನ್ನು ಬಿಡಲಿಲ್ಲ. ಅವರನ್ನು ಹತ್ಯೆ ಮಾಡಲಾಯಿತು.
ಇನ್ನು ನಿಮ್ಮನ್ನು ಬಿಡ್ತೇವ ಎಂದು ಸರಕಾರಕ್ಕೆ ಬೆದರಿಕೆ ಹಾಕಿದ ಆರೋಪದಲ್ಲಿ ಹಿಂದೂ ಮುಖಂಡ , ಅಖಿಲ
ಭಾರತ ಹಿಂದು ಮಹಾಸಭಾ ರಾಜ್ಯ ಕಾರ್ಯದರ್ಶಿ ಧರ್ಮೇಂದ್ರ ಅವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ..
ನಿನ್ನೆ (ಶನಿವಾರ)
ಮಂಗಳೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಧರ್ಮೇಂದ್ರ ಅವರು ದೇವಸ್ಥಾನ ಧ್ವಂಸ ಮಾಡಿರುವ ಬಿಜೆಪಿ
ಸರಕಾರದ ನಡೆಯನ್ನು ಖಂಡಿಸಿ ಆಕ್ರೋಶಭರಿತರಾಗಿ ಮಾತನಾಡುವ ವೇಳೆ ಗಾಂಧೀಜಿಯನ್ನು ನಾವು ಬಿಡಲಿಲ್ಲ.
ಅವರನ್ನು ಹತ್ಯೆ ಮಾಡಲಾಯಿತು. ಇನ್ನು ನಿಮ್ಮನ್ನು ಬಿಡ್ತೇವ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದರು.
ಇದು ಮುಖ್ಯಮಂತ್ರಿಗಳಿಗೆ ಕೊಲೆ ಬೆದರಿಕೆ ಎಂದು ವಿವಾದವಾಗಿತ್ತು.
ಈ ಹೇಳಿಕೆಯನ್ನು ವಿರೋಧಿಸಿ ಅಖಿಲ ಭಾರತ ಹಿಂದೂ ಮಹಾಸಭಾ ದ ರಾಜ್ಯಾಧ್ಯಕ್ಷ ಎಲ್ ಕೆ ಸುವರ್ಣ ಅವರು ಮಂಗಳೂರಿನ ಬರ್ಕೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದಲ್ಲಿ ಇಂದು ಮಂಗಳೂರು ಪೊಲೀಸರು ಧರ್ಮೇಂದ್ರ ಅವರನ್ನು ಬಂಧಿಸಿದ್ದಾರೆ.
ಇದನ್ನು ಓದಿ: ಗಾಂಧೀಜಿಯನ್ನು ಬಿಡಲಿಲ್ಲ, ನಿಮ್ಮನ್ನು ಬಿಡ್ತೇವ ಹೇಳಿಕೆ ವಿವಾದ- ಹಿಂದೂ ಮುಖಂಡ ಕ್ಷಮೆಯಾಚನೆ? (VIDEO)
ಕ್ಷಮೆಯಾಚನೆ ವಿಡಿಯೋ