ಕೆಲ ವರ್ಷಗಳ ಹಿಂದೆ ಮಂಗಳೂರು ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ಪೊಲೀಸ್ ಅಧಿಕಾರಿ ಕ್ಯಾನ್ಸರ್ ಗೆ ಬಲಿ
Sunday, September 26, 2021
ಮಂಗಳೂರು: ಕೆಲ ವರ್ಷಗಳ ಹಿಂದೆ ಮಂಗಳೂರಿನಲ್ಲಿ ಡಿಸಿಪಿಯಾಗಿ ಕರ್ತವ್ಯ
ನಿರ್ವಹಿಸಿದ್ದ ಡಾ ಕೆ ವಿ ಜಗದೀಶ್ ಅವರು ಮಾರಕ ಖಾಯಿಲೆ ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ.
2006 ರಲ್ಲಿ ಪೊಲಿಸ್ ಸೇವೆಗೆ ಸೇರಿದ್ದ ಇವರು 2017 ರಲ್ಲಿ ಐಪಿಎಸ್
ಅಧಿಕಾರಿಯಾಗಿ ಮುಂಬಡ್ತಿ ಹೊಂದಿದ್ದರು. ಕಳೆದ ಕೆಲ
ಸಮಯಗಳಿಂದ ಕ್ಯಾನ್ಸರ್ ಗೆ ತುತ್ತಾಗಿದ್ದ ಅವರು ಬೆಂಗಳೂರಿನ ಹೆಚ್ ಸಿ ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ
ಪಡೆಯುತ್ತಿದ್ದರು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಸಾವನ್ನಪ್ಪಿದ್ದಾರೆ. ಅವರ ಅಂತ್ಯಸಂಸ್ಕಾರ ಸೋಮವಾರ ಕೋಲಾರ ನಗರದಲ್ಲಿ ನಡೆಯಲಿದೆ