ಮಂಗಳೂರು ಪೊಲೀಸರಿಗೆ ಗೊತ್ತಿಲ್ಲದೆ ನಡೆದ ಅಣಕು ಕಾರ್ಯಾಚರಣೆಗೆ ಬೆಚ್ಚಿ ಬಿದ್ದ ಕುಡ್ಲದ ಜನತೆ
ಮಂಗಳೂರು: ಮಂಗಳೂರು ನಗರದ ಪೊಲೀಸ್ ಅಧಿಕಾರಿಗಳಿಗೂ ಗೊತ್ತಿಲ್ಲದೆ ಮಂಗಳೂರು
ನಗರ ಪೊಲಿಸ್ ಕಮೀಷನರ್ ಅವರು ನಡೆಸಿದ ಅಣಕು ಕಾರ್ಯಾಚರಣೆಗೆ ಕುಡ್ಲದ ಜನತೆ ಬೆಚ್ಚಿ ಬೀಳುವಂತೆ ಆದ
ಘಟನೆ ನಡೆದಿದೆ.
ಇಂದು ಮಧ್ಯಾಹ್ನ ವಿಡಿಯೋವೊಂದು ಪ್ರಸಾರವಾಗಿದ್ದು ಇದು ಮಂಗಳೂರು ನಗರದ
ಹೃದಯಭಾಗದಲ್ಲಿ ನಡೆದ ದರೋಡೆ ದೃಶ್ಯವಾಗಿತ್ತು. ಇದರಲ್ಲಿ ಕಾರಿನಲ್ಲಿ ಬಂದವರು ನಡೆದುಕೊಂಡು ಹೋಗುತ್ತಿದ್ದ
ಮಹಿಳೆಯ ಬ್ಯಾಗ್ ಎಳೆದುಕೊಂಡು ಹೋಗುತ್ತಿದ್ದು ಇದರ ವಿಡಿಯೋ ಎದೆ ಝಲ್ಲೆನಿಸುವಂತಿತ್ತು. ಈ ವಿಡಿಯೋ ಬಳಿಕ ಮಂಗಳೂರು ನಗರ ಅಪರಾಧ ವಿಭಾಗದ ಡಿಸಿಪಿ
ಅವರು ಕೂಡ ಈ ಬಗ್ಗೆ ಪರಿಶೀಲಿಸಲಾಗುತ್ತಿದ್ದು ಮಹಿಳೆ ಯಾರೆಂದು ಪತ್ತೆ ಹಚ್ಚಲಾಗುತ್ತಿದೆ. ಮಹಿಳೆ
ಯಾರೆಂದು ಗೊತ್ತಾಗದಿದ್ದರೆ ಸುಮೋಟೋ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ಈ ಬಗ್ಗೆ ಮಾಧ್ಯಮಗಳಲ್ಲಿಯೂ ಸುದ್ದಿ ಪ್ರಸಾರವಾಗಿ
ಹಾಡಹಗಲೆ ನಡೆದ ಘಟನೆಯಿಂದ ಜನತೆ ಬೆಚ್ಚಿ ಬೀಳುವಂತೆ ಮಾಡಿತ್ತು.
ಇದನ್ನು ಓದಿ: ಮಂಗಳೂರು: ಹಾಡಹಗಲೇ ನಡುರಸ್ತೆಯಲ್ಲಿ ಮಹಿಳೆಯ ದರೋಡೆಗೆ ಯತ್ನ: ಎದೆ ಜಲ್ಲೆನಿಸುತ್ತದೆ ದೃಶ್ಯ
ಆದರೆ ಈ ಬಗ್ಗೆ ವಿಡಿಯೋ
ಮೂಲಕ ಪ್ರತಿಕ್ರೀಯೆ ನೀಡಿದ ಮಂಗಳೂರು ನಗರ ಪೊಲೀಸ್ ಮೀಷನರ್ ಅವರು ಇದೊಂದು ಅಣಕು ಕಾರ್ಯಚರಣೆಯಾಗಿದ್ದು
ಇಂತಹ ಘಟನೆಗಳಾದಾಗ ಜನರು ಯಾವ ರೀತಿ ಪ್ರತಿಕ್ರೀಯಿಸುತ್ತಾರೆ.
ಪೊಲೀಸರು ಯಾವ ರೀತಿ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ತಿಳಿಯಲು ಂಆಡಲಾಗಿತ್ತು ಈ ಬಗ್ಗೆ ಪೊಲೀಸ್
ಅಧಿಕಾರಿಗಳಿಗೂ ಯಾವುದೆ ಮಾಹಿತಿಗಳನ್ನು ನೀಡಲಾಗಿರಲಿಲ್ಲ ಎಂದು ತಿಳಿಸಿದ್ದಾರೆ