MANGALORE: ಮಹಿಳೆಯರ ಮೇಲಿನ ತಲ್ವಾರ್ ದಾಳಿಗೆ ಕಾರಣ ಬಹಿರಂಗ- ಟೀಚರ್ ಮಾಡಿದ್ರಂತೆ ಮಾಟ! (VIDEO)
ಮಂಗಳೂರು: ಇಂದು ಮಧ್ಯಾಹ್ನ ಡಯಟ್ ಶಿಕ್ಷಣ ಸಂಸ್ಥೆಯಲ್ಲಿ ಮೂವರು ಮಹಿಳಾ ಸಿಬ್ಬಂದಿಗಳ
ಮೇಲೆ ನಡೆದ ತಲ್ವಾರ್ ದಾಳಿಗೆ ಯುವಕನ ಮಾನಸಿಕ ಅಸ್ವಸ್ಥತೆಯೆ ಕಾರಣ ಎಂದು ತಿಳಿದುಬಂದಿದೆ.
ಮೂವರು ಮಹಿಳೆಯರ ಮೇಲೆ
ತಲ್ವಾರ್ ದಾಳಿ ಮಾಡಿ ಸ್ಥಳೀಯರು ಮತ್ತು ಪೊಲಿಸರ ಕೈಗೆ ಸಿಕ್ಕಿಬಿದ್ದದ್ದ ಕುಂದಾಪುರದ ಯುವಕ ನವೀನ್
ಮಾನಸಿಕ ಅಸ್ವಸ್ಥನಾಗಿದ್ದ ಎಂಬುದು ತಿಳಿದುಬಂದಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್
ತಿಳಿಸಿದ್ದಾರೆ.
ನವೀನ್ ಪ್ಯಾರನಾಯ್ಡ್ ಸಿಝೋಪಿನಿಯಾ ಕ್ರೋನಿಕ್ ಎಂಬ ಮಾನಸಿಕ ರೋಗದಿಂದ
ಬಳಲುತ್ತಿದ್ದ. ಇದು ಗಂಭೀರ ಮಾನಸಿಕ ಖಾಯಿಲೆಯಾಗಿದೆ. ನವೀನ್ ಹಿಂದೆ ಇದೇ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಯಾಗಿದ್ದ.
ಈ ಸಂದರ್ಭದಲ್ಲಿ ಇಲ್ಲಿನ ಶಿಕ್ಷಕಿಯೊಬ್ಬರು ತನಗೆ ಗೌರವ ಕೊಡುತ್ತಿಲ್ಲ ಎಂದು ಭಾವಿಸಿದ್ದ. ಮತ್ತು
ಈ ಶಿಕ್ಷಕಿಯು ವಿದ್ಯಾರ್ಥಿಯೊಬ್ಬನೊಂದಿಗೆ ಸೇರಿ ತನಗೆ ಮಾಟ ಮಾಡಿದ್ದರು ಎಂದು ತಿಳಿದುಕೊಂಡಿದ್ದ.
ಅದಕ್ಕಾಗಿ ಈತ ಶಿಕ್ಷಕಿಯಲ್ಲಿ ಮಾಟ ತೆಗೆದುಬಿಡಿ ಎಂದು ಹೇಳಲು ಬರುತ್ತಿದ್.
ಪ್ರತಿ ಬಾರಿಯಂತೆ ಈ ಬಾರಿಯೂ ಶಿಕ್ಷಕಿ ಇಲ್ಲದೆ ಇರುವುದರಿಂದ ರೊಚ್ಚಿಗೆದ್ದ ಆತ ಇಂದು ಕುಂದಾಪುರದಿಂದ
ಬರುವಾಗಲೆ ಖರೀದಿಸಿ ತಂದ ಮಚ್ಚಿನಿಂದ ಅಲ್ಲಿದ್ದ ಮೂವರು
ಮಹಿಳಾ ಸಿಬ್ಬಂದಿಗೆ ಹಲ್ಲೆ ಮಾಡಿದ್ದಾನೆ. ಈತನನ್ನು
ಬಂಧಿಸಿರುವ ಪೊಲೀಸರು ಆತನ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.
ಇದನ್ನು ಓದಿ: Mangaluru: ಶಿಕ್ಷಕಿಗೆ ಗಿಫ್ಟ್ ನೀಡುವೆನೆಂದು ಬಂದ ಆಗಂತುಕನಿಂದ ಮೂವರು ಮಹಿಳೆಯರ ಮೇಲೆ ತಲವಾರು ದಾಳಿ: ಸಿಕ್ಕಿಬಿದ್ದ ಆರೋಪಿ