ಯೂಟ್ಯೂಬ್ ನೋಡಿ ಗರ್ಭಪಾತಕ್ಕೆ ಯತ್ನಿಸಿದ ಅತ್ಯಾಚಾರ ಸಂತ್ರಸ್ತೆ: ಮುಂದಾಗಿದ್ದೇನು?
Tuesday, September 28, 2021
ಇದೀಗ ಆಕೆಯ ದೇಹಸ್ಥಿತಿ ಕ್ಷೀಣಿಸಿದ್ದು, ಚಿಕಿತ್ಸೆ ಮುಂದುವರಿದಿದೆ. ಈಕೆ ಗರ್ಭಿಣಿಯಾಗಲು ಕಾರಣನಾದ ವ್ಯಕ್ತಿಯ ಮೇಲೆ ಅತ್ಯಾಚಾರ ಹಾಗೂ ಇತರ ಅಪರಾಧ ಪ್ರಕರಣ ದಾಖಲಿಸಿ ಪೊಲೀಸರು ಬಂಧಿಸಿದ್ದಾರೆ.
25 ವರ್ಷದ ಸಂತ್ರಸ್ತ ಯುವತಿಯನ್ನು ವಿವಾಹವಾಗುವುದಾಗಿ ನಂಬಿಸಿದ್ದ ಶೋಯೆಬ್ ಖಾನ್ (30) ಎಂಬ ಆರೋಪಿ 2016ರಿಂದಲೂ ಅತ್ಯಾಚಾರವೆಸಗುತ್ತಾ ಬಂದಿದ್ದಾನೆ. ಈ ನಡುವೆ ಆಕೆ ಗರ್ಭಿಣಿಯಾಗಿದ್ದಾಳೆ. ಈ ವಿಚಾರ ತಿಳಿದ ಆರೋಪಿ ಯೂಟ್ಯೂಬ್ ವೀಡಿಯೋ ನೋಡಿ ಗರ್ಭಪಾತ ಮಾಡಿಕೊಳ್ಳುವಂತೆ ಸೂಚಿಸಿದ್ದಾನೆ. ಅಲ್ಲದೆ ಅದರಲ್ಲಿ ಸೂಚಿಸಲಾದ ಔಷಧಿಯನ್ನು ಸೇವಿಸುವಂತೆ ಸಲಹೆ ಮಾಡಿದ್ದ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಯುವತಿ ಸ್ವತಃ ಗರ್ಭಪಾತ ಪ್ರಕ್ರಿಯೆಯನ್ನು ಮಾಡಿಕೊಳ್ಳಲು ಮುಂದಾಗಿದ್ದಾಳೆ. ಆದರೆ ಪರಿಣಾಮ ಆಕೆಯ ದೇಹಸ್ಥಿತಿ ವಿಷಮವಾಗಿ ಪರಿಣಮಿಸಿದೆ. ತಕ್ಷಣ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲದೆ ಆರೋಪಿ ಶೋಯೆಬ್ ಖಾನ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.