Advocate expired- ಹಿರಿಯ ವಕೀಲ ಜೋಡುಮಠ ರಾಮಚಂದ್ರ ಭಟ್ ನಿಧನ; ಗಣ್ಯರ ಸಂತಾಪ
ಮಂಗಳೂರು ವಕೀಲರ ಸಂಘದ ಹಿರಿಯ ಸದಸ್ಯರಾದ ಜೋಡುಮಠ ರಾಮಚಂದ್ರ ಭಟ್ ಮಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಭಟ್ ಅವರ ನಿಧನದಿಂದ ಮಂಗಳೂರು ವಕೀಲರ ಸಂಘವು ಒಬ್ಬ ಮೇಧಾವಿ, ನಿಷ್ಟಾವಂತ ಮತ್ತು ಎಲ್ಲರೊಂದಿಗೆ ಬೆರೆಯುವ ಸೌಮ್ಯ ಸ್ವಭಾವದ ಮೃದುಮಾತಿನ ಹಿರಿಯ ಸಹೋದ್ಯೋಗಿಯನ್ನು ಕಳೆದುಕೊಂಡಿದೆ ಎಂದು ಶೋಕ ವ್ಯಕ್ತಪಡಿಸಿದೆ.
ಜೆ. ಆರ್. ಭಟ್ ಮಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷರಾಗಿದ್ದು, ಸರಕಾರಿ ವಕೀಲರು ಹಾಗೂ ಹೆಚ್ಚುವರಿ ಅಭಿಯೋಜಕರೂ ಅಗಿದ್ದರು.
ಕಸ್ಟಂ ಇಲಾಖೆಯ ವಿಶೇಷ ಅಭಿಯೋಜಕರಾಗಿ ಅವರು ಸೇವೆ ಸಲ್ಲಿಸಿದ್ದರು ಮತ್ತು ಹಲವಾರು ಕಿರಿಯ ವಕೀಲರಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದರು. ಸಿವಿಲ್ ಮತ್ತು ಕ್ರಿಮಿನಲ್ ಎರಡೂ ಪ್ರಕಾರಗಳಲ್ಲಿ ಪರಿಣತಿ ಹೊಂದಿದ್ದರು.
IAS ಎರಡೂ ಪರೀಕ್ಷೆ ಪಾಸಾಗಿದ್ದರು. ಮೃತರು ಅವರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ನಿಧನಕ್ಕೆ ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಎನ್. ನರಸಿಂಹ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಎಚ್.ವಿ. ರಾಘವೇಂದ್ರ, ಉಪಾಧ್ಯಕ್ಷ ಜಿನೇಂದ್ರ ಕುಮಾರ್ ಹಾಗೂ ಇತರರು ಮೃತರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.