ಕುಡ್ಲದ ಹುಡುಗಿ ಆ್ಯಂಕರ್ ಅನುಶ್ರೀ ಹೆಸರು ಡ್ರಗ್ಸ್ ಕೇಸಿನ ಚಾರ್ಜ್ ಶೀಟ್ ನಲ್ಲಿ ದಾಖಲು- ಅದರಲ್ಲಿ ಬರೆದದ್ದೇನು?- ಇಲ್ಲಿದೆ ಮಾಹಿತಿ
Wednesday, September 8, 2021
ಮಂಗಳೂರು; ಮಂಗಳೂರು ಹುಡುಗಿ ಆ್ಯಂಕರ್ ಅನುಶ್ರೀ ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. 2020 ಸೆಪ್ಟೆಂಬರ್ ನಲ್ಲಿ ಡ್ರಗ್ಸ್ ಸೇವನೆ ಮಾಡಿ ಸಿಕ್ಕಿಬಿದ್ದಿದ್ದ ಬಾಲಿವುಡ್ ನಟ ಕಿಶೋರ್ ಮತ್ತು ತರುಣ್ ಬಂಧನದ ವೇಳೆ ಅನುಶ್ರೀ ಹೆಸರನ್ನು ಪ್ರಸ್ತಾಪಿಸಿದ್ದರು. ಆ ಸಂದರ್ಭದಲ್ಲಿ ಅನುಶ್ರೀಯನ್ನು ಮಂಗಳೂರಿಗೆ ಕರೆಸಿದ ಪೊಲೀಸರು ವಿಚಾರಣೆ ನಡೆಸಿದ್ದರು. ವಿಚಾರಣೆ ಬಳಿಕ ಈ ವಿಚಾರ ನೆನೆಗುದಿಗೆ ಬಿದ್ದಿತ್ತು.
ಇದನ್ನು ಓದಿ-ಅನುಶ್ರೀ ವಿರುದ್ಧ ಡ್ರಗ್ಸ್ ಆರೋಪ ನಾನು ಮಾಡಿಲ್ಲ, ಚಾರ್ಜ್ ಶೀಟ್ ನಲ್ಲಿರೋದು ಸುಳ್ಳು: ಕಿಶೋರ್ ಅಮನ್ ಶೆಟ್ಟಿ
ಈ ಪ್ರಕರಣದ ಚಾರ್ಜ್ ಶೀಟನ್ನು ಪೊಲೀಸರು ನ್ಯಾಯಾಲಯಕ್ಕೆ ಇತ್ತೀಚೆಗೆ ಸಲ್ಲಿಸಿದ್ದು ಇದರಲ್ಲಿ ಅನುಶ್ರೀ ಡ್ರಗ್ಸ್ ಸೇವನೆ ಮಾಡಿರುವುದು ಮತ್ತು ಅವರೆ ಖರೀದಿ ಮಾಡಿ ತರುತ್ತಿದ್ದರೂ ಎಂಬ ಕಿಶೋರ್ ಹೇಳಿಕೆ ದಾಖಲಾಗಿದೆ.
ಚಾರ್ಜ್ ಶೀಟ್ ನಲ್ಲಿ ದಾಖಲಾದ ಕಿಶೋರ್ ಹೇಳಿಕೆ ಇಂತಿದೆ.
2007-08 ರಲ್ಲಿ ಬೆಂಗಳೂರಿನ ಸಂಜಯ್ ಎಂಬವರ ಮಾಲೀಕತ್ವದ ಎಕ್ಸೆಲೆನ್ಸಿ ಡ್ಯಾನ್ಸ್ ಅಕಾಡೆಮಿಯಲ್ಲಿದ್ದಾಗ ಟಿವಿ ಆ್ಯಂಕರ್ ಆಗಿರುವ ಅನುಶ್ರೀ ಅವರಿಗೆ ಕುಣಿಯೋಣ ಬಾರಾ ಡ್ಯಾನ್ಸ್ ನಲ್ಲಿ ಕೊರಿಯೋಗ್ರಾಫಿ ಮಾಡುತ್ತಿದ್ದ ನನ್ನ ಸ್ನೇಹಿತ ತರುಣ್ ನನ್ನನ್ನು ಅನುಶ್ರೀಗೆ ಪರಿಚಯಿಸಿದ್ದ. ಬಳಿಕ ನನ್ನಲ್ಲಿ ಕೂಡ ಕೊರಿಯೋಗ್ರಾಫಿ ಮಾಡಲು ಅನುಶ್ರೀ ಹೇಳಿದ್ದರಿಂದ ಅವರಿಗೆ ಕೊರಿಯೋಗ್ರಾಫಿ ಮಾಡಿದ್ದೆ. ಈ ಕಾರ್ಯಕ್ರಮದಲ್ಲಿ ಅನುಶ್ರೀ ವಿಜಯಿ ಆಗಿದ್ದರು. ಡ್ಯಾನ್ಸ್ ರಿಹರ್ಸಲ್ ಮಾಡುವ ಸಂದರ್ಭದಲ್ಲಿ ತರುಣ್ ಬಾಡಿಗೆ ಮನೆಯಲ್ಲಿ ತಡರಾತ್ರಿ ತನಕ ಪ್ರಾಕ್ಟಿಸ್ ಮಾಡುತ್ತಿದ್ದೆವು. ಊಟ ಮಾಡುವ ಸಮಯದಲ್ಲಿ ಮಾದಕ ಪಿಲ್ಸ್ಗಳನ್ನು ಸೇವನೆಯನ್ನು ಮಾಡಿದ್ದೇವೆ. ಕೆಲವು ದಿನಗಳಲ್ಲಿ ಅನುಶ್ರೀ ಮತ್ತು ತರುಣ್ ಇಬ್ಬರೇ ರೂಂನಲ್ಲಿ ಉಳಿದುಕೊಳ್ಳುತ್ತಿದ್ದರು. ಈ ಪ್ರೋಗ್ರಾಂನಲ್ಲಿ ವಿಜಯಿಯಾದುದಕ್ಕೆ ನಾನು, ತರುಣ್ ಮತ್ತು ಅನುಶ್ರೀ ಬೆಂಗಳೂರಿನಲ್ಲಿ ಮಾದಕ ವಸ್ತು ಸೇವಿಸಿ ಡ್ರಿಂಕ್ಸ್ ಪಾರ್ಟಿ ಮಾಡಿ ಸಂಭ್ರಮಿಸಿದ್ದೇವೆ. ಡ್ರಗ್ಸ್ ಖರೀದಿಯಲ್ಲಿ ಕೂಡ ಅನುಶ್ರೀ ಭಾಗಿಯಾಗಿದ್ದಾರೆ. ನಾವು ಹಲವಾರು ಬಾರಿ ಮಾದಕ ವಸ್ತುಗಳನ್ನು ಸೇವಿಸಿದ್ದೇವೆ. ಈ ಡ್ರಗ್ಸ್ ಗಳನ್ನು ಅನುಶ್ರೀ ಅವರೇ ಖರೀದಿಸಿ ತಂದು ನಮಗೆ ಕೊಡುತ್ತಿದ್ದರು. ಇದರ ಸೇವನೆಯಿಂದ ಡ್ಯಾನ್ಸ್ ಮಾಡಲು ಹೆಚ್ಚು ತಾಕತ್ತು ಕೊಡುತ್ತದೆ. ಇದರಿಂದ ಡ್ಯಾನ್ಸ್ ಮಾಡಲು ಸಂತಸ ಸಿಗುತ್ತದೆ. ಪ್ರಾಕ್ಟಿಸ್ ಮಾಡಲು ಸುಲಭವಾಗುತ್ತದೆ ಎಂದು ಮಾತಾಡುತ್ತಿದ್ದೆವು. ಡ್ರಗ್ಸ್ ಯಾರು ನೀಡುತ್ತಾರೆ ಎಂಬುದು ಅನುಶ್ರೀಯವರಿಗೆ ನಮಗಿಂತ ಹೆಚ್ಚು ತಿಳಿದಿದೆ ....