ಬೆಂಗಳೂರಿನಲ್ಲಿ ಯುವತಿ ಮೇಲೆ ಕ್ಯಾಬ್ ಚಾಲಕನಿಂದ ಅತ್ಯಾಚಾರ
Wednesday, September 22, 2021
ಬೆಂಗಳೂರು: ಬೆಂಗಳೂರು ಸಿಟಿಯಲ್ಲಿ ಯುವತಿಯೊಬ್ಬಳನ್ನು ಕ್ಯಾಬ್ ಚಾಲಕನೊಬ್ಬ ಅತ್ಯಾಚಾರಗೈದಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಕ್ಯಾಬ್ ಚಾಲಕ ಯುವತಿ ಮೇಲೆ ನಿನ್ನೆ ತಡರಾತ್ರಿ 2 ಗಂಟೆ ಸುಮಾರಿಗೆ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.ನಗರದ ಹೆಚ್ಎಸ್ಆರ್ ಲೇಔಟ್ನಿಂದ ಮುರುಗೇಶಪಾಳ್ಯಕ್ಕೆ ಹೋಗುವ ವೇಳೆ ಯುವತಿಯನ್ನು ಕ್ಯಾಬ್ ಚಾಲಕ ಅತ್ಯಾಚಾರ ಮಾಡಿದ್ದಾನೆ ಎಂದು ಹೇಳಲಾಗಿದೆ.
ಮುರುಗೇಶಪಾಳ್ಯಕ್ಕೆ ಹೋಗಲು ಯುವತಿಯು ಕ್ಯಾಬ್ ಬುಕ್ ಮಾಡಿದ್ದು ಬಂದ ಕ್ಯಾಬ್ ನಲ್ಲಿ ಯುವತಿ ಕುಳಿತುಕೊಂಡಿದ್ದಳು.ಚಾಲಕ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಜೀವನ್ ಭೀಮಾನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.