ಯಾರಿಗೂ ಗೊತ್ತಿಲ್ಲದ ಬ್ಲಾಕ್ ಟಿಕೆಟ್ ಮಾರಾಟದ ಕಹಾನಿಯನ್ನು ಬಿಚ್ವಿಟ್ಟ ರವಿ ಡಿ. ಚೆನ್ನಣ್ಣನ್ನವರ್
Tuesday, September 28, 2021
ಮಂಗಳೂರು: ರಾಜ್ಯದ ದಕ್ಷ ಪೊಲೀಸ್ ಅಧಿಕಾರಿಗಳಲ್ಲಿ ರವಿ ಡಿ. ಚನ್ನಣ್ಣನವರ್ ಕೂಡ ಓರ್ವರು. ಚನ್ನಣ್ಣನವರ್ ಕೆಲಸ ಕಾರ್ಯಗಳಿಗೆ, ಭಾಷಣಗಳಿಗೆ ಫಿದಾ ಆಗಿರುವ ಎಷ್ಟೋ ಮಂದಿ ಅವರ ಫ್ಯಾನ್ ಗಳೇ ಆಗಿದ್ದಾರೆ. ಪೊಲೀಸ್ ಇಲಾಖೆಗೆ ಸೇರಬೇಕೆಂಬ ಎಷ್ಟೋ ಯುವಕರಿಗೆ ರವಿ ಡಿ. ಚೆನ್ನಣ್ಣವವರ್ ಅವರೇ ಸ್ಪೂರ್ತಿಯಾಗಿದ್ದಾರೆ. ಇಷ್ಟೆಲ್ಲಾ ಜನರ ಪ್ರೀತಿ ಗಳಿಸಿರುವ, ದಕ್ಷ ಅಧಿಕಾರಿ ಎಣಿಸಿಕೊಂಡ ಅವರು ಒಂದು ಕಾಲದಲ್ಲಿ ಸಿನಿಮಾದ ಬ್ಲಾಕ್ ಟಿಕೆಟ್ ಮಾರುತ್ತಿದ್ದರು ಎಂಬ ಅಚ್ಚರಿ ವಿಚಾರವನ್ನು ಅವರೇ ರಿವಿಲ್ ಮಾಡಿದ್ದಾರೆ.
ಡಾರ್ಲಿಂಗ್ ಕೃಷ್ಣ ಅಭಿನಯಿಸಲಿರುವ ‘ದಿಲ್ ಪಸಂದ್’ ಸಿನಿಮಾ ಪತ್ರಿಕಾಗೋಷ್ಠಿಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರವಿ ಡಿ. ಚನ್ನಣ್ಣನವರ್ ಅಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
ಮಾತನಾಡುತ್ತಾ ಅವರು 'ಎಲ್ಲೂ ಹೇಳದಿದ್ದ ಸತ್ಯವೊಂದವನ್ನು ನಾನು ಇಂದು ಹೇಳುತ್ತಿದ್ದೇನೆ. ನಾನು ಗದಗದಲ್ಲಿ ಬ್ಲಾಕ್ ನಲ್ಲಿ ಸಿನಿಮಾ ಟಿಕೆಟ್ ಮಾರುತ್ತಿದ್ದೆ. ಮಹಾಲಕ್ಷ್ಮೀ, ಶಾಂತಿ ಚಿತ್ರಮಂದಿಗಳಲ್ಲಿ ಬ್ಲಾಕ್ ಟಿಕೆಟ್ ಮಾರಿದ್ದೆ' ಎಂದಿದ್ದಾರೆ.
ನಟನೆ, ಬರವಣಿಗೆ, ಸಿನಿಮಾಗಳ ಬಗ್ಗೆ ಅಪಾರ ಆಸಕ್ತಿ ಹೊದಿರುವ ರವಿ ಡಿ. ಚೆನ್ನಣ್ಣನವರ್ ಮೊದಲಿನಿಂದಲೇ ನಾಟದ ನಂಟು ಹೊಂದಿದ್ದರು. ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದರು. ಕಾಲೇಜು ದಿನಗಳಿಂದಲೇ ಸಿನಿಮಾಗಳು ತಮ್ಮ ಮೇಲೆ ಬಹಳಷ್ಟು ಪ್ರಭಾವ ಬೀರಿದ್ದು, ಡಾ.ರಾಜ್ಕುಮಾರ್ ‘ಮಯೂರ’ ಸಿನಿಮಾ ನೋಡಿ ಸ್ವಾಭಿಮಾನದ ಪಾಠ ಕಲಿತೆ ಎಂದು ಅವರು ಮೆಲುಕು ಹಾಕಿದರು.
ಇತ್ತೀಚೆಗೆ ಬರವಣಿಗೆ ಆರಂಭಿಸಿರುವ ಅವರು, ಅನೇಕ ಕಥೆಗಳನ್ನು ಬರೆದಿದ್ದಾರೆ. ಆದರೆ ಯಾವುದನ್ನು ಪ್ರಕಟಗೊಳಿಸಿಲ್ಲವಂತೆ. ‘ಬರೆದ ಪುಸ್ತಕವನ್ನು ಜನರು ಓದುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಸಿನಿಮಾವನ್ನು ಎಲ್ಲರೂ ನೋಡುತ್ತಾರೆ’ ಎಂದು ಅವರು ಶ್ಲಾಘಿಸಿದರು.