-->
Conversion prevention act- ಸ್ವಇಚ್ಚೆ ಮತಾಂತರಕ್ಕೆ ಮಾತ್ರ ಕಾನೂನಿನಲ್ಲಿ ಅವಕಾಶವಿದೆ: ಸಿಎಂ ಬೊಮ್ಮಾಯಿ

Conversion prevention act- ಸ್ವಇಚ್ಚೆ ಮತಾಂತರಕ್ಕೆ ಮಾತ್ರ ಕಾನೂನಿನಲ್ಲಿ ಅವಕಾಶವಿದೆ: ಸಿಎಂ ಬೊಮ್ಮಾಯಿ

ಸ್ವಇಚ್ಚೆ ಮತಾಂತರಕ್ಕೆ ಮಾತ್ರ ಕಾನೂನಿನಲ್ಲಿ ಅವಕಾಶವಿದೆ: ಸಿಎಂ ಬೊಮ್ಮಾಯಿ





ಬಲವಂತ ಯಾ ಆಸೆ, ಆಮಿಷವೊಡ್ಡಿ ಮತಾಂತರ ಮಾಡುವುದನ್ನು ತಡೆಗಟ್ಟುವ ಉದ್ದೇಶದಿಂದ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ಚಿಂತನೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.. ಸ್ವಇಚ್ಛೆಯ ಮತಾಂತರಕ್ಕೆ ಮಾತ್ರ ಕಾನೂನಿನಲ್ಲಿ ಅವಕಾಶವಿದೆ ಎಂದು ಮುಖ್ಯಮಂತ್ರಿ ಪುನರುಚ್ಚರಿಸಿದ್ದಾರೆ.


ಕಲಬುರಗಿ ಸೇರಿದಂತೆ ಮತ್ತಿತರ ಕಡೆ ತಾನು ಭೇಟಿ ನೀಡಿದಾಗ ಕೆಲವು ಕಡೆ ಮತಾಂತರವಾಗುತ್ತಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಬಲವಂತದ ಮತಾಂತರ ತಡೆಗಟ್ಟಲು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.


ಈ ರೀತಿಯ ಗಂಭೀರ ಆರೋಪ ರಾಜ್ಯದಲ್ಲಿ ಕೇಳಿ ಬರುತ್ತಲೇ ಇದೆ. ಇದಕ್ಕೆ ಶಾಶ್ವತವಾಗಿ ಕಡಿವಾಣ ಹಾಕುವ ಅಗತ್ಯವಿರುವ ಕಾರಣ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ಚಿಂತನೆಯಿದೆ ಎಂದು ತಿಳಿಸಿದರು.


ಭಾರತದ ಸಂವಿಧಾನದಲ್ಲಿ ಪ್ರತಿಯೊಬ್ಬ ಪ್ರಜೆಗೂ ಧಾರ್ಮಿಕ ಸ್ವಾತಂತ್ರ್ಯವಿದೆ. ತಾನು ಬಯಸುವ ಧರ್ಮದಲ್ಲಿ ಬಾಳ್ವೆ ನಡೆಸಲು ಪ್ರತಿಯೊಬ್ಬರಿಗೂ ಹಕ್ಕಿದೆ. ಬಲವಂತದ ಮತಾಂತರಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. 


ಈಗಾಗಲೇ ಕಾನೂನಿನಲ್ಲಿ ಬಲವಂತದ ಮತಾಂತರಕ್ಕೆ ಅವಕಾಶ ಇಲ್ಲವಾದರೂ, ಬಿಜೆಪಿಯು ಮತಾಂತರ ನಿಷೇಧ ಕಾಯ್ದೆ ಎಂಬ ವಿಚಾರವನ್ನು ಈ ಬಾರಿ ರಾಜಕೀಯಗೊಳಿಸಲು ಮುಂದಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.

Ads on article

Advertise in articles 1

advertising articles 2

Advertise under the article