ಮಂಗಳೂರಿನಲ್ಲಿ ನಿಶ್ಚಿತಾರ್ಥವಾಗಿದ್ದ 21 ವರ್ಷದ ಯುವತಿ ನಾಪತ್ತೆ- ಯುವಕನ ಕಡೆಯವರು ನೀಡಿದ ಬಂಗಾರದ ಜೊತೆಗೆ ಪರಾರಿ- ಅಕ್ಬರ್ ಅಲಿ ಗೆ 90 ಸಾವಿರ ಟ್ರಾನ್ಸ್ ಫರ್!
ಮಂಗಳೂರು: ಬೊಮ್ಮೆಹಳ್ಳಿ ಕಡೆಯ
ಯುವಕನೊಂದಿಗೆ ನಿಶ್ಚಿತಾರ್ಥವಾಗಿದ್ದ ಯುವತಿಯೋರ್ವ ಳು ಯುವಕನ ಕಡೆಯವರು ನೀಡಿದ ಚಿನ್ನಾಭರಣದೊಂದಿಗೆ ನಾಪತ್ತೆಯಾದ
ಘಟನೆ ನಡೆದಿದೆ..
ಮಂಗಳೂರಿನ ಅರೋಮಾ ಪಾರ್ಕ ಅಪಾರ್ಟಮೆಂಟ್ ಎಂಬಲ್ಲಿ ವಾಚ್ ಮೆನ್ ಆಗಿ ಕೆಲಸ ಮಾಡಿಕೊಂಡಿರುವ ಯಶೋದಾ ಎಂಬವರ ಮಗಳು ರೇಶ್ಮಾ (21) ನಾಪತ್ತೆಯಾದವಳು.
ಈಕೆಗೆ ಬೊಮ್ಮಹಳ್ಳಿ ಎಂಬಲ್ಲಿ ಸಂಬಂಧ ನೋಡಿ ಆಗಷ್ಟ್ 21ರಂದು ಮದುವೆಯ ನಿಶ್ಚಿತಾರ್ಥವನ್ನು ಮಾಡಲಾಗಿತ್ತು. ಮಂಗಳೂರಿನ ಮನೆಯಲ್ಲಿ ನಡೆದ
ನಿಶ್ಚಿತಾರ್ಥ ಸಂದರ್ಭದಲ್ಲಿ ಹುಡುಗನ ಮನೆಯವರು ಒಂದು ಲಕ್ಷ ಮೌಲ್ಯದ ಬಂಗಾರದ ಚೈನು, ಬಂಗಾರದ ಉಂಗುರ ಬೆಳ್ಳಿ ಉಗುಂರ, ಕಿಯೋಲೆ, ಬೆಳ್ಳಿ ನೀಡಿದ್ದರು. ನಿಶ್ಚಿತಾರ್ಥ ನಡೆದ ಐದೆ ದಿನದಲ್ಲಿ ರೇಶ್ಮಾ
ನಾಪತ್ತೆಯಾಗಿದ್ದಾಳೆ. ಈಕೆ ನಾಪತ್ತೆಯಾಗುವ ವೇಳ ಯುವಕನ ಕಡೆಯವರು ನೀಡಿದ ಬಂಗಾರದ ಜೊತೆಗೆ ಪರಾರಿಯಾಗಿದ್ದಾಳೆ.
ಇದರ ಜೊತೆಗೆ ಈಕೆಯ ತಂದೆ ದುಡಿಮೆಯಿಂದ
ಕೂಡಿಟ್ಟ ಹಣವನ್ನು ಎಗರಿಸಿದ್ದಾಳೆ. ತಂದೆಯ ಬ್ಯಾಂಕಿನಲ್ಲಿದ್ದ
90,000/-
ಹಣವನ್ನು ಅಕ್ಬರ್ ಅಲಿ ಎಂಬುವರ ಖಾತೆಗೆ ವರ್ಗಾಯಿಸಿದ್ದಾಳೆ, ಯುವಕನ ಕಡೆಯವರು ನೀಡಿದ ಚಿನ್ನಾಭರಣ ಮತ್ತು ತಂದೆಯ ಹಣವನ್ನು
ಲಪಟಾಯಿಸಿದ ಈಕೆಯ ವಿರುದ್ದ ಕ್ರಮ ಕೈಗೊಳ್ಳುವಂತೆ ಆಕೆಯ ತಾಯಿ ಮಂಗಳೂರಿನ ಬರ್ಕೆ ಠಾಣೆಯಲ್ಲಿ ದೂರು
ದಾಖಲಿಸಿದ್ದಾರೆ