CJI bats for national judiciary infra corporation- ಮಹಿಳಾ ವಕೀಲರಿಗೆ ಶೌಚಾಲಯ ಕೊರತೆ: ನ್ಯಾಯಾಂಗ ಮೂಲಸೌಕರ್ಯ ನಿಗಮದ ಬೇಡಿಕೆ ಇಟ್ಟ ಮು. ನ್ಯಾ. ಎನ್.ವಿ. ರಮಣ
Sunday, September 5, 2021
ಮಹಿಳಾ ವಕೀಲರಿಗೆ ಶೌಚಾಲಯ ಕೊರತೆ: ನ್ಯಾಯಾಂಗ ಮೂಲಸೌಕರ್ಯ ನಿಗಮದ ಬೇಡಿಕೆ ಇಟ್ಟ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ
ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಅತಿ ಹೆಚ್ಚು ಮಹಿಳಾ ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್ ಕಂಡಿದೆ.
ನೂತನ ನ್ಯಾಯಮೂರ್ತಿಗಳ ಪ್ರತಿಜ್ಞಾ ಸ್ವೀಕಾರ ಸಮಾರಂಭದ ಬಳಿಕ ಮಾತನಾಡಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, ಮಹಿಳಾ ವಕೀಲರಿಗೆ ಟಾಯ್ಲೆಟ್ ಸೇರಿದಂತೆ ಮೂಲಭೂತ ಸೌಕರ್ಯದ ಕೊರತೆ ಇದೆ ಎಂಬ ಗಂಭೀರ ಮಾತುಗಳನ್ನಾಡಿದ್ದಾರೆ.
ದೇಶಕ್ಕೆ ರಾಷ್ಟ್ರೀಯ ನ್ಯಾಯಾಂಗ ಮೂಲಸೌಕರ್ಯ ನಿಗಮದ ಬೇಡಿಕೆಯನ್ನು ಮುಂದಿಟ್ಟ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, ಹೈಕೋರ್ಟ್‌ಗಳಲ್ಲಿ ವಕೀಲರು, ನ್ಯಾಯಾಧೀಶರು ಎದುರಿಸುತ್ತಿರುವ ಸಮಸ್ಯೆಗಳು, ಮೂಲಸೌಕರ್ಯಗಳ ಕೊರತೆ ಬಗ್ಗೆ ತಾವು ಬೃಹತ್ ವರದಿಯನ್ನು ತಯಾರಿಸಿದ್ದು, ಶೀಘ್ರದಲ್ಲೇ ಕೇಂದ್ರ ಕಾನೂನು ಸಚಿವರಿಗೆ ಅದನ್ನು ಸಲ್ಲಿಸುವುದಾಗಿ ಹೇಳಿದರು.