-->
ಅಪಘಾತದಿಂದ ಮಗ ಸಾವು- ಸಿಕ್ಕ 27 ಲಕ್ಷ ಪರಿಹಾರ ಹಣವನ್ನು ಈ ದಂಪತಿ ಮಾಡಿದ್ದೇನು ಗೊತ್ತಾ?

ಅಪಘಾತದಿಂದ ಮಗ ಸಾವು- ಸಿಕ್ಕ 27 ಲಕ್ಷ ಪರಿಹಾರ ಹಣವನ್ನು ಈ ದಂಪತಿ ಮಾಡಿದ್ದೇನು ಗೊತ್ತಾ?

 



ಥಾಣೆ: ಅಪಘಾತದಲ್ಲಿ ಮಗ ಮೃತಪಟ್ಟ ಬಳಿಕ ಸಿಕ್ಕ 27 ಲಕ್ಷ ರೂ ಪರಿಹಾರ ಹಣವನ್ನು ಹೆತ್ತವರು ಬಡ ಮತ್ತು ನಿರ್ಗತಿಕ ಮಕ್ಕಳ ಸಹಾಯಕ್ಕೆ ನೀಡುವ ನಿರ್ಧಾರ ಕೈಗೊಂಡಿದ್ದಾರೆ

 

2018 ರಲ್ಲಿ ನಡೆದ  ಅಪಘಾತವೊಂದಲ್ಲಿ  ಈ ಪೋಷಕರು ಪುತ್ರನನ್ನು ಕಳೆದುಕೊಂಡಿದ್ದರು. ತಮಗೆ ದೊರೆತ ಪರಿಹಾರದ ಹಣವನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ  ನೀಡಲು ಕುಟುಂಬ ನಿರ್ಧರಿಸಿದೆ. 2018ರಲ್ಲಿ ಮುಂಬೈನ ಈಸ್ಟರ್ನ್  ಎಕ್ಸ್ ಪ್ರೆಸ್  ಹೆದ್ದಾರಿಯ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದು ಬಳಿಕ ಎದುರಿಗೆ ಬಂದ ಕಂಟೇನರ್ ಢಿಕ್ಕಿ ಹೊಡೆದ ಪರಿಣಾಮ ಇವರ ಮಗ ಮೃತಪಟ್ಟಿದ್ದ. ಆತನಿಗೆ  21 ವರ್ಷವಾಗಿತ್ತು. ಈ ಹಿನ್ನೆಲೆ ಆತನ ಪೋಷಕರು ಥಾಣೆ ಮೋಟಾರ್ ಆಕ್ಸಿಡೆಂಟ್ ಕ್ಲೈಮ್ಸ್ ಟ್ರಿಬ್ಯೂನಲ್ ಗೆ ಅರ್ಜಿ ಸಲ್ಲಿಸಿ, 50 ಲಕ್ಷ ರೂಪಾಯಿ ಪರಿಹಾರ ಹಣ ಕೋರಿದ್ದರು.


ಜಿಲ್ಲಾ ನ್ಯಾಯಾಧೀಶ ಮತ್ತು mact  ಸದಸ್ಯರಾದ ಆರ್.ಎನ್. ರೋಕಡೆ ಅವರ ಮಧ್ಯಸ್ಥಿಕೆಯ ನಂತರ, ಕಾರು ಮಾಲೀಕ 27.30 ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ. .ಪರಿಹಾರ ಹಣ ಪ್ರಕಟಗೊಂಡ ಬಳಿಕ ದಂಪತಿ, ನಮಗೆ ನಮ್ಮ ಮಗನನ್ನು ಕಳೆದುಕೊಂಡಿದ್ದಕ್ಕೆ ದುಃಖವಿದ್ದು ಅವನ ಸಾವಿನ ಪರಿಹಾರವಾಗಿ ಬಂದ ಹಣವನ್ನು ಬಡ ಮತ್ತು ನಿರ್ಗತಿಕ ಮಕ್ಕಳಿಗೆ ಸಹಾಯ ಮಾಡಲು ಟ್ರಸ್ಟ್  ಮೂಲಕ ನೀಡುತ್ತೇವೆ ಎಂದು ತಿಳಿಸಿದ್ದಾರೆ.

 

ಇದೇ ದಂಪತಿಗಳು  ಮಗ ಮೃತಪಟ್ಟಾಗ ಅವನ 2  ಕಣ್ಣುಗಳನ್ನು ದಾನ ಮಾಡಿದ್ದರು.

Ads on article

Advertise in articles 1

advertising articles 2

Advertise under the article