ಪ್ರೀತಿಸಿ ಮದುವೆಯಾದವಳು ಪಕ್ಕದ ಮನೆಯವನ ಜತೆ ಪರಾರಿ...ಮನನೊಂದ ಗಂಡ ಆತ್ಮಹತ್ಯೆಗೆ ಶರಣು..
Saturday, September 25, 2021
ವಿಜಯಪುರ: ಪ್ರೀತಿಸಿ ಮದುವೆಯಾದವಳು ಪಕ್ಕದ ಮನೆಯವನ ಜತೆ ಎಸ್ಕೇಪ್ ಆಗಿದ್ದಾಳೆ ಎಂಬ ಕಾರಣಕ್ಕೆ
ಮನನೊಂದ ಗಂಡ ಇದೀಗ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆ ತಾಳಿಕೋಟಿ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ವೆಂಕಟೇಶ ದೋರನಹಳ್ಳಿ (25) ಆತ್ಮಹತ್ಯೆ ಶರಣಾಗಿರುವ ವ್ಯಕ್ತಿ. ಸಾವಿಗೂ ಮುನ್ನ ವೆಂಕಟೇಶ್ ಫೇಸ್ಬುಕ್ನಲ್ಲಿ ವಿಡಿಯೋ ಒಂದನ್ನು ಹರಿಬಿಟ್ಟು ನೇಣಿಗೆ ಶರಣಾಗಿದ್ದಾನೆ. ಎರಡು ವರ್ಷಗಳ ಹಿಂದೆ ವೆಂಕಟೇಶ್ ಮತ್ತು ಯುವತಿ ಪ್ರೀತಿಸಿ ಮದುವೆಯಾಗಿದ್ದರು. ಆದರೆ, ವೆಂಕಟೇಶ್ ಪಕ್ಕದ ಮನೆಯ ಸೋದರ ಸಂಬಂಧಿ ಶ್ರೀಶೈಲ್ ದೋರನಹಳ್ಳಿ ಎಂಬುವನ ಜೊತೆಗೆ ಯುವತಿ ಎಸ್ಕೇಪ್ ಆಗಿದ್ದಾಳೆಂದು ಆರೋಪಿಸಲಾಗಿದೆ. ಈ ಸಂಬಂಧ ವೆಂಕಟೇಶ್ ತಾಳಿಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದ. ದೂರು ನೀಡಿದರೂ ವೆಂಕಟೇಶ್ ಜತೆ ಇರೊಲ್ಲ, ಪ್ರಿಯಕರ ಶ್ರೀಶೈಲ್ ಜತೆ ಇರುವುದಾಗಿ ಯುವತಿ ಹೇಳಿದ್ದಾಳೆ. ಹೀಗಾಗಿ ಅವಮಾನ ಸಹಿಸದೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಘಟನೆ ಸಂಬಂಧ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.