ಗಾಂಧೀಜಿಯನ್ನು ಬಿಡಲಿಲ್ಲ, ನಿಮ್ಮನ್ನು ಬಿಡ್ತೇವ ಹೇಳಿಕೆ ವಿವಾದ- ಹಿಂದೂ ಮುಖಂಡ ಕ್ಷಮೆಯಾಚನೆ? (VIDEO)
Sunday, September 19, 2021
ಮಂಗಳೂರು: ಗಾಂಧೀಜಿಯನ್ನು ಬಿಡಲಿಲ್ಲ, ನಿಮ್ಮನ್ನು ಬಿಡ್ತೇವ ಎಂದು ಸರಕಾರದ ವಿರುದ್ದ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಕಾರ್ಯದರ್ಶಿ ಧರ್ಮೇಂದ್ರ ಅವರು ಕ್ಷಮೆಯಾಚನೆ ಮಾಡಿದ್ದಾರೆ.
ಮಂಗಳೂರಿನಲ್ಲಿ ನಿನ್ನೆ ಪತ್ರಿಕಾಗೋಷ್ಠಿ ನಡೆಸಿದ್ದ ಧರ್ಮೇಂದ್ರ ಅವರು ರಾಜ್ಯ ಸರಕಾರ ದೇವಸ್ಥಾನ ಧ್ಬಂಸ ಮಾಡಿರುವ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ವೇಳೆ ಮಾತನಾಡಿದ ಅವರು ಹಿಂದೂ ವಿರೋಧಿಯಾಗಿದ್ದ ಕಾರಣಕ್ಕೆ ಮಹಾತ್ಮ ಗಾಂಧೀಜಿಯನ್ನೆ ನಾವು ಬಿಡಲಿಲ್ಲ. ಅವರನ್ನು ಹತ್ಯೆ ಮಾಡಲಾಯಿತು. ಇನ್ನೂ ನಿಮ್ಮನ್ನು ಬಿಡ್ತೇವ ಎಂದು ಹೇಳಿದ್ದರು. ಇದು ಮುಖ್ಯಮಂತ್ರಿ ಗಳಿಗೆ ಕೊಲೆ ಬೆದರಿಕೆ ಎಂದೆ ಬಿಂಬಿತವಾಗಿತ್ತು.
ಈ ಹೇಳಿಕೆಯ ವಿರುದ್ದ ಅಖಿಲ ಭಾರತ ಹಿಂದೂ ಮಹಾಸಭಾದ ಅಧ್ಯಕ್ಷ ಎಂದು ಹೇಳುತ್ತಿರುವ ಎಲ್ ಕೆ ಸುವರ್ಣ ಎಂಬವರು ಮಂಗಳೂರಿನ ಬರ್ಕೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಧರ್ಮೇಂದ್ರ ಅವರು ವಿಡಿಯೋ ಮೂಲಕ ಕ್ಷಮೆ ಯಾಚನೆ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಗಾಂಧೀಜಿ ಅವರ ಹಿಂದುತ್ವದ ವಿರೋಧ ನೀತಿ ಕುರಿತು ನಾನು ಮಾತಾಡಿದ್ದೇನೆ .ನಾನು ಯಾರಿಗೂ ಬೆದರಿಕೆಯನ್ನು ಹಾಕಿಲ್ಲ .ನನ್ನ ಹೇಳಿಕೆಯಲ್ಲಿ ಹತ್ಯೆ ಎಂಬ ಶಬ್ದವು ಅಸಂವಿಧಾನಿಕವಾಗಿದ್ದರೆ ಆ ವಿಚಾರವಾಗಿ ನಾನು ಕ್ಷಮೆ ಕೇಳುತ್ತೇನೆ .ಧರ್ಮದ ರಕ್ಷಣೆಗೆ ಹಿಂದೂ ಮಹಾಸಭಾ ಯಾವಾಗಲೂ ನಿಲ್ಲುತ್ತದೆ ಎಂಬುದು ನನ್ನ ಮಾತಿನ ಅರ್ಥ ಎಂದಿದ್ದಾರೆ.
ನಿನ್ನೆ ನೀಡಿದ ಹೇಳಿಕೆಯ ವಿಡಿಯೋ