ಬ್ಯೂಟಿಶಿಯನ್ ಆಗಲು ಬಂದ ಮಣಿಪುರ ಯುವತಿ ಪೊಲೀಸ್ ಅತಿಥಿಯಾದಳು: ಆಕೆ ಮಾಡಿದ ತಪ್ಪಾದರೂ ಏನು?
Monday, September 20, 2021
ಬೆಂಗಳೂರು: ನಗರದಲ್ಲಿ ಬ್ಯೂಟಿಶಿಯನ್ ಆಗಿದ್ದ ಯುವತಿ ಸೇರಿದಂತೆ ಆತನ ಜೊತೆಗಾರನನ್ನು ಬಾಣಸವಾಡಿ ಪೊಲೀಸರು ಮಾದಕವಸ್ತು ಮಾರಾಟ ಮಾಡುತ್ತಿರರುವ ಆರೋಪದಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಲ್ಲಿ ಮಣಿಪುರ ಮೂಲದ ಯುವತಿ ಹೆರಾಯಿನ್ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದಳು ಎನ್ನಲಾಗಿದೆ.
ಈ ಇಬ್ಬರು ಅಂತರಾಜ್ಯ ಪೆಡ್ಲರ್ ಗಳಲ್ಲಿ ಯುವತಿಯು ಬ್ಯೂಟಿಶಿಯನ್ ಕೆಲಸಕ್ಕೆಂದು ಮಣಿಪುರದಿಂದ ಬೆಂಗಳೂರಿಗೆ ಬಂದಿದ್ದಳು. ಆದರೆ ಇಲ್ಲಿ ಸುಲಭವಾಗಿ ಹಣ ಸಂಪಾದನೆ ಮಾಡಲೆಂದು ಡ್ರಗ್ಸ್ ದಂಧೆಗೆ ಇಳಿದಿದ್ದಾಳೆ ಎನ್ನಲಾಗಿದೆ. ಈಕೆ ಕಮ್ಮನಹಳ್ಳಿಯಲ್ಲಿರುವ ಬ್ಯೂಟಿ ಆ್ಯಂಡ್ ಸ್ಪಾದಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಸ್ನೇಹಿತನ ಜೊತೆ ಸೇರಿ ಹೆರಾಯಿನ್ ಮಾರಾಟ ಮಾಡಿದ್ದಳು ಎಂದು ಆರೋಪಿಸಿ ಪೊಲೀಸರು ಬಂಧಿಸಿದ್ದಾರೆ.
ಸದ್ಯ ಇಬ್ಬರನ್ನು ಬಂಧಿಸಿರುವ ಬಾಣಸವಾಡಿ ಪೊಲೀಸರು ಆರೋಪಿಗಳಿಂದ 1.5 ಲಕ್ಷ ರೂ. ಮೌಲ್ಯದ 10 ಗ್ರಾಂ ಹೆರಾಯಿನ್ ಅನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.