ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸದಸ್ಯೆ ಆತ್ಮಹತ್ಯೆ: ನೇತ್ರದಾನ ಮಾಡುವಂತೆ ಡೆತ್ ನೋಟ್
Thursday, September 16, 2021
ಉಡುಪಿ: ಉಡುಪಿ ಜಿಲ್ಲೆಯ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸದಸ್ಯೆ ಮೃತಪಟ್ಟ ಮೇಲೆ ತಮ್ಮ ಕಣ್ಣುಗಳನ್ನು ದಾನ ಮಾಡಬೇಕೆಂದು ಡೆತ್ ನೋಟ್ ಬರೆದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಉಡುಪಿ ಜಿಲ್ಲೆಯ ಕುಕ್ಕಿಕಟ್ಟೆಯ ಆಶಾ ಶೆಟ್ಟಿ (48) ಆತ್ಮಹತ್ಯೆ ಮಾಡಿಕೊಂಡವರು.
ಆಶಾ ಶೆಟ್ಟಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸದಸ್ಯೆಯಾಗಿದ್ದು, ತುಳು ಕೂಟ, ಭಜನಾ ಮಂಡಳಿ, ಚಂಡೆ ಬಳಗ ಇವುಗಳಲ್ಲಿ ಸಕ್ರಿಯವಾಗಿದ್ದರು. ಮೃತ ಆಶಾ ಶೆಟ್ಟಿಯವರ ಬಳಿ ಡೆತ್ ನೋಟ್ ಲಭ್ಯವಾಗಿದೆ. ಅದರಲ್ಲಿ ಅವರು ತಾವು ಮಡಿದ ಮೇಲೆ ನೇತ್ರದಾನ ಮಾಡುವಂತೆ ತಿಳಿಸಿದ್ದಾರೆ.
ಆಶಾ ಶೆಟ್ಟಿ ನೇತ್ರಗಳನ್ನು ರಕ್ಷಿಸಿಡುವ ಪ್ರಕ್ರಿಯೆ ನಡೆಸಲು ಅವರ ಮೃತದೇಹವನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಯಿತು. ಈ ಪ್ರಕ್ರಿಯೆ ಪೂರೈಸಿದ ಬಳಿಕ ಬಳಿಕ ಅವರ ದೇಹವನ್ನು ಅಂತ್ಯಸಂಸ್ಕಾರ ನಡೆಸಲಾಯಿತು.
ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.