VIDEO: ಬಿಜೆಪಿಗೆ ಹಿಂದುತ್ವದ ಮೇಲೆ ನಂಬಿಕೆಯಿಲ್ಲ, ಅವರಿಗೆ ಮತ ಮಾತ್ರ ಬೇಕಿರುವುದು, ದೇವಸ್ಥಾನ ಧ್ವಂಸಕ್ಕಿಂತಲೂ ದೊಡ್ಡದು ಅವರು ಮಾಡಲಿದ್ದಾರೆ- ಕಾಂಗ್ರೆಸ್ ದ.ಕ ಜಿಲ್ಲಾಧ್ಯಕ್ಷ
ಮಂಗಳೂರು:
ಬಿಜೆಪಿಯವರಿಗೆ ಹಿಂದುತ್ವದ ಮೇಲೆ ನಂಬಿಕೆ ಇಲ್ಲ. ಅವರಿಗೆ ಹಿಂದುಗಳ ಮತ ಮಾತ್ರ ಬೇಕಾಗಿರುವುದು. ಸಾವಿನ ಮನೆಯಲ್ಲಿ ರಾಜಕೀಯ ಮಾಡಿದವರಿಂದ ದೇವಸ್ಥಾನ ಧ್ವಂಸ
ನಡೆದಿದೆ. ಅವರು ಇದಕ್ಕಿಂತಲೂ ದೊಡ್ಡದು ಮಾಡಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್
ಅಧ್ಯಕ್ಷ ಹರೀಶ್ ಕುಮಾರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಮೈಸೂರಿನಲ್ಲಿ ದೇವಾಲಯ ಧ್ವಂಸ
ಮಾಡಿದ್ದು ತಾಲಿಬಾನ್ ಕೃತ್ಯ, ಇದು ಸಂವಿಧಾನ ವಿರೋಧಿ. ದೇವರ ಹೆಸರಿನಲ್ಲಿ ರಾಜಕೀಯ ಮಾಡಿ ಆಡಳಿತಕ್ಕೇರಿದ್ದು ಬಿಜೆಪಿ. ಕಾಂಗ್ರೆಸ್ ಆಡಳಿತದಲ್ಲಿ
ಇಂತಹ ಘಟನೆಗಳು ಯಾವತ್ತು ನಡೆದಿಲ್ಲ. ಸಾವಿನ ಮನೆಯಲ್ಲಿ ಬಿಜೆಪಿಯವರು ರಾಜಕೀಯ ಮಾಡಿದವರು. ಕೆಲ ಕೊಲೆ ಘಟನೆಗಳಲ್ಲಿ, ಪ್ರಕರಣಗಳಲ್ಲಿ ಬಿಜೆಪಿಯ ಅಂಗಸಂಸ್ಥೆಯ ಸಂಘಟನೆಯವರೇ ಜೈಲು ಸೇರಿದ್ದಾರೆ ಅಂದರು.
ಇದೀಗ
ರಾಜ್ಯದಲ್ಲಿ ತಾಲಿಬಾನ್ ಆಡಳಿತ, ಸಂಸ್ಕೃತಿ ಬಗ್ಗೆ ಚರ್ಚೆ ನಡೆಯುತ್ತಿದೆ. ಸಿದ್ದರಾಮಯ್ಯನವರು ಕೂಡಾ ಈ ಬಗ್ಗೆ ಮಾತಾಡಿದ್ದಾರೆ.
ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರಿಗೆ ಬೆಲೆ ಕೊಡುತ್ತಿಲ್ಲ ಎಂದು ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷರು ರಾಜೀನಾಮೆ ನೀಡುವಾಗ ಹೇಳಿಕೆ ನೀಡಿದ್ದಾರೆ ಎಂದರು
ಸೆಕ್ಷನ್
ಹಾಕಿದರೂ ಸಾವಿನ ಮೆರವಣಿಗೆ ನಡೆಸಿ ಕೇಕೆ ಹಾಕಿದ ಬಿಜೆಪಿಗೇ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು. ದುಷ್ಕೃತ್ಯಗಳನ್ನು ಮಾಡಿ ರಾಜಕೀಯ ನಡೆಸುವ ಬಿಜೆಪಿ ಆಡಳಿತದಲ್ಲಿ ತಾಲಿಬಾನ್ ಸಂಸ್ಕೃತಿ ಇದೆ. ಮಂಗಳೂರಲ್ಲಿ ನಡೆದ ಅನೈತಿಕ ಪೊಲೀಸ್ ಗಿರಿ, ಪಬ್ ದಾಳಿಗಳೆಲ್ಲಾ ತಾಲಿಬಾನ್ ಸಂಸ್ಕೃತಿ ಎಂದರು. ಒಟ್ಟಾರೆ ಭಯೋತ್ಪಾದನಾ, ತಾಲಿಬಾನ್ ಸಂಸ್ಕೃತಿ ಬಿಜೆಪಿಯದ್ದು ಅಂದರು.