High court decision welcomed- ಖಾಸಗಿ ಶಾಲೆಗಳಲ್ಲಿ 15% ಶುಲ್ಕ ಕಡಿತ: ರಾಜ್ಯ ಹೈಕೋರ್ಟ್ ಮಹತ್ವದ ಆದೇಶವನ್ನು ಸ್ವಾಗತಿಸಿದ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟ
ಖಾಸಗಿ ಶಾಲೆಗಳಲ್ಲಿ 15% ಶುಲ್ಕ ಕಡಿತ: ರಾಜ್ಯ ಹೈಕೋರ್ಟ್ ಮಹತ್ವದ ಆದೇಶವನ್ನು ಸ್ವಾಗತಿಸಿದ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟ
ಸರಕಾರ ನಿಗದಿಮಾಡಿದ್ದ ಶೇ 30 ಶುಲ್ಕ ಕಡಿತವನ್ನು 15% ಕ್ಕೆ ಇಳಿಸಿದ ಹೈಕೋರ್ಟ್ ಆದೇಶವನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟ ಸ್ವಾಗತ ಮಾಡಿದೆ.
ನಮ್ಮಲ್ಲಿ ಹಲವಾರು ಖಾಸಗಿ ಶಾಲೆಗಳು ಪೋಷಕರಿಗೆ ಶಾಲಾ ಶುಲ್ಕದಲ್ಲಿ ಬಹಳಷ್ಟು ರಿಯಾಯಿತಿ ನೀಡಿವೆ, ಆದರೂ ಕೆಲವು ಪೋಷಕರು ಶುಲ್ಕವನ್ನೇ ಪಾವತಿಸದೆ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳು ಬಹಳಷ್ಟು ಸಂಕಷ್ಟಕ್ಕೆ ಎದುರಾಗಿತ್ತು,
ಶಿಕ್ಷಕರ ವೇತನ ಇತರ ಆಡಳಿತಾತ್ಮಕ ವೆಚ್ಚಕ್ಕೂ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದವು, ನ್ಯಾಯಾಲಯದ ಈ ತೀರ್ಪುನಿಂದಾಗಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಆಡಳಿತ ಮಂಡಳಿ ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ತಿಳಿಸಿದ್ದಾರೆ.
ಮಾನ್ಯ ಹೈಕೋರ್ಟ್ ನ ಆದೇಶವನ್ನು ಸ್ವಾಗತಿಸಿರುವ ಅವರು, ಸರಕಾರ, ಶಿಕ್ಷಣ ಇಲಾಖೆ ನೀಡಿದ ಕೋವಿಡ್ ಸುರಕ್ಷತಾ ನಿಯಮಗಳನ್ನು ಎಲ್ಲಾ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸಬೇಕೆಂದು ವಿನಂತಿಸಿದ್ದಾರೆ.