ಸುಳ್ಯ- ಹೈಸ್ಕೂಲ್ ವಿದ್ಯಾರ್ಥಿನಿಯ ಜೊತೆ ಪ್ರೀತಿಯ ನಾಟಕವಾಡಿ ಅತ್ಯಾಚಾರ- ಆರೋಪಿ ಅಂದರ್!
Tuesday, September 14, 2021
ಮಂಗಳೂರು: ಹೈಸ್ಕೂಲ್ ವಿದ್ಯಾರ್ಥಿನಿಯೊಬ್ಬಳ ಜೊತೆಗೆ ಪ್ರೀತಿಯ ನಾಟಕ ಮಾಡಿ ಅತ್ಯಾಚಾರ ಮಾಡಿದ ಕಾಮುಕ ನನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.
ಮಂಡೆಕೋಲು ಗ್ರಾಮದ ಸೊರಂಜ ಜಿತೇಶ್ ಎಂಬಾತ ಈ ದುಷ್ಕೃತ್ಯ ಎಸಗಿದವನು. ಈತ ಅಪ್ರಾಪ್ತ ಬಾಲಕಿಯೊಂದಿಗೆ ಪ್ರೀತಿಯ ನಾಟಕವಾಡಿ ಅತ್ಯಾಚಾರ ನಡೆಸಿದ್ದಾನೆಂಬ ಆರೋಪದಲ್ಲಿ ಪೋಲೀಸರು ಬಂಧಿಸಿದ್ದಾರೆ.
ಮಂಡೆಕೋಲು ಗ್ರಾಮದ ಸೊರಂಜ ಜಿತೇಶ್ ಹೈಸ್ಕೂಲ್ ವಿದ್ಯಾರ್ಥಿನಿಯೊಬ್ಬಳನ್ನು Instagram
ನಲ್ಲಿ ಪರಿಚಯಿಸಿಕೊಂಡಿದ್ದ. ಬಳಿಕ ವಿದ್ಯಾರ್ಥಿನಿಯ ಜತೆ ಪ್ರೀತಿ ಪ್ರೇಮದ ನಾಟಕವಾಡಿ ಆಕೆಯನ್ನು ಅತ್ಯಾಚಾರ ನಡೆಸಿದ್ದಾನೆ. ಅತ್ಯಾಚಾರ ಕ್ಕೊಳಗಾದ ವಿದ್ಯಾರ್ಥಿನಿಯ ಮನೆಯವರು ವಿಷಯ ತಿಳಿದು ಸುಳ್ಯ ಪೋಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೋಲೀಸರು ಆರೋಪಿಯನ್ನು ಸುಳ್ಯದ ಅಡ್ಕಾರ್ ಬಳಿ ಬಂಧಿಸಿದ್ದಾರೆ. ಈತ ವಿದ್ಯಾರ್ಥಿನಿಯನ್ನು ಕರೆದೊಯ್ಯುತ್ತಿದ್ದ ಈತನ ಆಲ್ಟೋ ಕಾರನ್ನು ಪೋಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.