ಗಾಂಧಿಯನ್ನು ಬಿಟ್ಟಿಲ್ಲ, ನಿಮ್ಮನ್ನು ಬಿಡ್ತೇವ ಪ್ರಕರಣ- ಬಿಜೆಪಿಯ ವಿರುದ್ದ ವಾಗ್ದಾಳಿ ನಡೆಸಿದ ಹಿಂದೂ ಮುಖಂಡ!
ಮಂಗಳೂರು:
ಗಾಂಧಿಯನ್ನು ಬಿಟ್ಟಿಲ್ಲ , ನಿಮ್ಮನ್ನು
ಬಿಡ್ತೇವ ಎಂಬ ಅವಹೇಳನಕರಿ ಹೇಳಿಕೆ ನೀಡಿದ ಅಖಿಲ ಭಾರತ ಹಿಂದೂ ಮಹಾಸಭಾ ದ ರಾಜ್ಯ ಕಾರ್ಯದರ್ಶಿ ಬಂಧನ
ಪ್ರಕರಣ ಬಳಿಕ ಮೊದಲ ಬಾರಿಗೆ ಪತ್ರಿಆಕಾಗೋಷ್ಟಿ ನಡೆಸಿದ
ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಅವರು ಬಿಜೆಪಿ ರಾಜ್ಯ ಸರಕಾರದ ವಿರುದ್ದ
ವಾಗ್ದಾಳಿ ನಡೆಸಿದ್ದಾರೆ
ಧರ್ಮೇಂದ್ರ
ಅವರು ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಅವರ ಮೇಲೆ ಪ್ರಕರಣವನ್ನು ದಾಖಲಿಸಲಿ. ಆದರೆ ಅವರ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗದವರ ಮೇಲೂ ಪ್ರಕರಣ ದಾಖಲಿಸಲಾಗಿದೆ. ಈ ಮೂಲಕ ಬಿಜೆಪಿ ಸರಕಾರ
ಹಿಂದೂ
ಮಹಾಸಭಾವನ್ನು ಮುಗಿಸುವ ಕಾರ್ಯವನ್ನು ಮಾಡುತ್ತಿದೆ ಎಂದರು.
ಧರ್ಮೇಂದ್ರ
ಅವರು ಪತ್ರಿಕಾಗೋಷ್ಟಿ ಮಾಡುವ ದಿನ ನಾನು ಬೆಂಗಳೂರು
ಪ್ರವಾಸದಲ್ಲಿದ್ದೆ. ನನ್ನ ಮೇಲೂ ಪ್ರಕರಣ ದಾಖಲಿಸಿದ್ದಾರೆ. ಈ ಹೇಳಿಕೆಯ ವಿರುದ್ದ ಬೆದರಿಕೆ ಪ್ರಕರಣ ಹಾಕಬಹುದಿತ್ತು. ಆದರೆ ಪೋರ್ಜರಿ, ಚೀಟಿಂಗ್ ಪ್ರಕರಣ ದಾಖಲಿಸಲಾಗಿದೆ. ಚುನಾವಣೆ ಆಯೋಗದಲ್ಲಿ ನೋಂದಾವಣೆಯಾಗಿರುವ ನಮ್ಮ ಪಕ್ಷವನ್ನು ನಕಲಿ ಎಂದು ದೂರಿನ ಹಿನ್ನೆಲೆಯಲ್ಲಿ ಪ್ರಕರಣ
ದಾಖಲಿಸಿದ್ದಾರೆ 2018ರಲ್ಲಿ ನನ್ನನ್ನು ಹನಿಟ್ರ್ಯಾಪ್
ಪ್ರಕರಣದಲ್ಲಿ
ಸುಳ್ಳು ಆರೋಪ ಮಾಡಿ ಬಂಧಿಸಿ ಪಕ್ಷದಿಂದ ದೂರವುಳಿಯುವಂತೆ ಮಾಡಲಾಗಿತ್ತು ಪಕ್ಷವು, ಆಂತರಿಕ ತನಿಖೆ ಮಾಡಿ ನಾನು ತಪಿತಸ್ಥನಲ್ಲ ಎಂದು ನನಗೆ ಪಕ್ಷದ
ರಾಜ್ಯಾಧ್ಯಕ್ಷ ಹುದ್ದೆ ಯ ಜವಾಬ್ದಾರಿ ನೀಡಿದೆ. ಸಂಘ ಪರಿವಾರ ಬಿಟ್ಟು ಯಾರೂ ಕೂಡ ಹಿಂದೂಗಳ ಪರ ಮಾತಾಡಬಾರದು. ಮಾತಾಡಿದರೆ ಅವರನ್ನು
ಜೈಲಿಗೆ ಕಳುಹಿಸಲಾಗುತ್ತದೆ ಎಂದು
ಆರೋಪಿಸಿದರು.
ಬಿಜೆಪಿ
ಹಿಂದೂ ಮಹಾಸಭಾವನ್ನು ಮುಗಿಸುವ ಕಾರ್ಯ ಮಾಡುತ್ತಿದೆ. ಇವರಿಗೆ ಧೈರ್ಯವಿದ್ದರೆ ಚುನಾವಣೆಯಲ್ಲಿ
ನಮ್ಮ ವಿರುದ್ಧ ಹೋರಾಟ ನಡೆಸಲಿ. ನಾವು ಮುಂದೆ ಅಧಿಕಾರಕ್ಕೆ
ಬಂದ ಸಂದರ್ಭದಲ್ಲಿ ತಕ್ಕ ಉತ್ತರ ಕೊಡ್ತೇವೆ ಎಂದರು.