ಯುವತಿಗೆ ಮರುಳಾದ ಸೇನೆಯ ವೈದ್ಯಾಧಿಕಾರಿ ಆಕೆಯೊಂದಿಗೆ ರಾತ್ರಿ ಕಳೆದ: ಕಾಮದ ನಶೆಯಲ್ಲಿ ಸಹಿ ಹಾಕಿ ಪೇಚಿಗೆ ಸಿಲುಕಿದ
Thursday, September 23, 2021
ಭುವನೇಶ್ವರ (ಒಡಿಶಾ): ಇತ್ತೀಚಿಗೆ ಶ್ರೀಮಂತ ಪುರುಷರನ್ನು ಹನಿಟ್ರ್ಯಾಪ್ ಬಲೆಗೆ ಕೆಡವಿ ಬ್ಲ್ಯಾಕ್ ಮೇಲ್ ಮಾಡುತ್ತಿರುವ ದಂಧೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿವೆ. ತಮ್ಮ ಒಣಪು ಒಯ್ಯಾರಗಳಿಂದ ಪುರುಷರನ್ನು ಪರಿಚಯ ಮಾಡಿ, ಸಲಿಗೆ ಬೆಳೆಸುವ ಇಂತಹ ಯುವತಿಯರು ಅವರ ಜತೆ ಲೈಂಗಿಕ ಕ್ರಿಯೆ ನಡೆಸಿ ಬಳಿಕ ಬ್ಲ್ಯಾಕ್‌ಮೇಲ್ ನಡೆಸುತ್ತಾರೆ. ಇಂಥದ್ದೇ ಒಂದು ಘಟನೆ ಒಡಿಶಾದಲ್ಲಿ ನಡೆದಿದೆ.
ಸೇನೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯಾಧಿಕಾರಿಯನ್ನೇ ಯುವತಿಯೊಬ್ಬಳು ಹನಿಟ್ರ್ಯಾಪ್ ಗೆ ಕೆಡವಿ ಆತನಿಂದ ಲಕ್ಷಾಂತರ ರೂ. ಹಣವನ್ನು ಪಡೆದಿದ್ದಾಳೆ. ಎರಡು ವರ್ಷಗಳ ಹಿಂದೆ ಈ ವೈದ್ಯಾಧಿಕಾರಿಯನ್ನು ಒಡಿಶಾದಲ್ಲಿನ ಬೇಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಣೆಗೆ ವರ್ಗ ಮಾಡಲಾಗಿತ್ತು. ಈ ನಡುವೆ ಉತ್ತರ ಪ್ರದೇಶದ ಕಾನ್ಪುರ ಎಂಬಲ್ಲಿನ ಯುವತಿ ಇನ್‌ಸ್ಟಾಗ್ರಾಮ್ ಮೂಲಕ ಈ ವೈದ್ಯಾಧಿಕಾರಿಗೆ ಪರಿಚಯವಾಗಿದ್ದಾಳೆ.
ಇವಳು ತನ್ನ ಬಣ್ಣಬಣ್ಣದ ಮಾತುಗಳಿಂದ ಅಧಿಕಾರಿಯನ್ನು ತನ್ನತ್ತ ಸೆಳೆದುಕೊಂಡಿದ್ದಾಳೆ. ಇವರಿಬ್ಬರ ಸ್ನೇಹ ಬೆಳೆದು ಸಲಿಗೆಯ ಮಟ್ಟಕ್ಕೆ ಬಂದಿದೆ. ಸಲಿಗೆ ಲೈಂಗಿಕ ಕ್ರಿಯೆ ನಡೆಸುವ ಮಟ್ಟಕ್ಕೂ ಬಂದಿದೆ. ಬಳಿಕ ಆಕೆ ಗುಟ್ಟಾಗಿ ಈ ಅಧಿಕಾರಿಯ ಜತೆ ಕೆಲವು ರಾತ್ರಿಗಳನ್ನು ಕಳೆದಿದ್ದಾಳೆ. ಈ ವೇಳೆ ಆಕೆ ಗುಟ್ಟಾಗಿ ವೈದ್ಯಾಧಿಕಾರಿಯೊಂದಿಗೆ ನಡೆದ ಲೈಂಗಿಕ ಕ್ರಿಯೆಯ ವೀಡಿಯೋ ಮಾಡಿಕೊಂಡಿದ್ದಾಳೆ. ಆತನಿಗೆ ತಿಳಿಯದಂತೆ ಈ ವೀಡಿಯೋ ಚಿತ್ರೀಕರಣ ಮಾಡಿದ್ದಳು.
ಕೆಲ ದಿನಗಳ ಬಳಿಕ ಈ ವೀಡಿಯೋಗಳನ್ನು ತೋರಿಸಿ ಬ್ಲ್ಯಾಕ್‌ಮೇಲ್ ಮಾಡಲು ತೊಡಗಿದ್ದಾಳೆ ಯುವತಿ. ಮರ್ಯಾದೆಗೆ ಅಂಜಿದ ವೈದ್ಯಾಧಿಕಾರಿ ಯುವತಿಯ ಬೇಡಿಕೆಯಂತೆ 10 ಲಕ್ಷ ರೂ.ಗಳನ್ನು ಕೊಟ್ಟಿದ್ದಾನೆ. ಅಷ್ಟಕ್ಕೆ ಬಿಡದ ಆಕೆ ವೈದ್ಯಾಧಿಕಾರಿ ತನ್ನನ್ನು ಮದುವೆಯಾಗಿದ್ದಾನೆಂಬ ದಾಖಲೆಯನ್ನೂ ಸೃಷ್ಟಿಸಿದ್ದಾಳೆ. ಕಾಮದ ನಶೆಯಲ್ಲಿ ಇರುವಾಗ ಆಕೆ ವೈದ್ಯಾಧಿಕಾರಿಯಿಂದ ಸಹಿಯನ್ನೂ ಪಡೆದುಕೊಂಡಿದ್ದಾಳೆ.
ಈ ವಿಚಾರ ವೈದ್ಯಾಧಿಕಾರಿಯ ಸಹೋದರ ಸಂಬಂಧಿಗೆ ತಿಳಿದು ಆತ ಪೊಲೀಸ್ ದೂರು ದಾಖಲಿಸಿದ್ದಾನೆ ಸದ್ಯ ಯುವತಿ ಪರಾರಿಯಾಗಿದ್ದು, ಪೊಲೀಸರು ಪತ್ತೆ ಕಾರ್ಯ ನಡೆಸುತ್ತಿದ್ದಾರೆ.