-->
ISRO Rectruitment- ಪದವೀಧರರಿಗೆ ಭವ್ಯ ಅವಕಾಶ; ಇಸ್ರೋ, ಬೆಂಗಳೂರಿಲ್ಲಿ ಉದ್ಯೋಗ: ಕಡೇ ದಿನ 1/10/2021

ISRO Rectruitment- ಪದವೀಧರರಿಗೆ ಭವ್ಯ ಅವಕಾಶ; ಇಸ್ರೋ, ಬೆಂಗಳೂರಿಲ್ಲಿ ಉದ್ಯೋಗ: ಕಡೇ ದಿನ 1/10/2021

ISRO Rectruitment- ಇಸ್ರೋ, ಬೆಂಗಳೂರಿಲ್ಲಿ ಉದ್ಯೋಗ: ಕಡೇ ದಿನ 1/10/2021





ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಯುವ ವಿಜ್ಞಾನಿಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.



ನೇರವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಸೂಚಿಸಲಾಗಿದ್ದ, ಅಕ್ಟೋಬರ್ 1, 2021 ಅರ್ಜಿ ಸಲ್ಲಿಸಲು ಕೊನೇ ದಿನವಾಗಿದೆ. ಅರ್ಹ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.



ಹುದ್ದೆಗಳ ವಿವರ:

1) ಕಿರಿಯ ಸಂಶೋಧನಾ ವಿಜ್ಞಾನಿ (ಜೆಆರ್‌ಎಫ್‌)- 16 ಹುದ್ದೆ

Junior Reserach Fellow (JRF) -16 post



2) ಸಂಶೋಧನಾ ಸಹಾಭಾಗಿಗಳು (ಆರ್‌ಎ)- 2 ಹುದ್ದೆ

Reserach Associates (RA) -2 post



ವೇತನ ಶ್ರೇಣಿ: ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಸ್ರೋ ನೇಮಕಾತಿ ನಿಯಮ ಅನುಸಾರ ಕಿರಿಯ ಸಂಶೋಧನಾ ವಿಜ್ಞಾನಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ Rs 35100/-, ಸಂಶೋಧನಾ ಸಹಾಭಾಗಿಗಳು ಆಯ್ಕೆಯಾದ ಅಭ್ಯರ್ಥಿಗಳಿಗೆ Rs 47,100/- ವೇತನ ನಿಗದಿಪಡಿಸಲಾಗಿದೆ.


ಶೈಕ್ಷಣಿಕ ಅರ್ಹತೆ:

ಇಸ್ರೋ ಅಧಿಸೂಚನೆಯಲ್ಲಿ ವಿವರಿಸಿದಂತೆ ಯಾವುದೇ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಸಂಬಂಧಿತ ವಿಭಾಗಗಳಲ್ಲಿ ಎಂಇ/ಎಂಟೆಕ್/ಪಿಎಚ್‌ಡಿ ಪದವಿಯನ್ನು ಪಡೆದಿರಬೇಕು.


ವಯೋಮಿತಿ

ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 28 ಹಾಗೂ ಗರಿಷ್ಟ 35 ವರ್ಷ ವಯಸ್ಸಿನವರಾಗಿರಬೇಕು. ಮೀಸಲಾತಿ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.


ಆಯ್ಕೆ ಪ್ರಕ್ರಿಯೆ ಹೇಗೆ..?

ಅಭ್ಯರ್ಥಿಗಳ ಅರ್ಜಿಗಳನ್ನು ಪರಿಗಣಿಸಿ 'ಶಾರ್ಟ್ ಲಿಸ್ಟಿಂಗ್' ಮಾಡಲಾಗುವುದು. ಮತ್ತುಆ ಬಳಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.


ಅರ್ಜಿ ಸಲ್ಲಿಸುವ ವಿಧಾನ;


೧- ಇಸ್ರೋ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ


೨ ಮುಖಪುಟದಲ್ಲಿ ನೇಮಕಾತಿ ವಿಭಾಗ ಕ್ಲಿಕ್ ಮಾಡಿ


೩- 'ಆನ್‌ನಲ್ಲಿ ಅನ್ವಯಿಸು' ಕ್ಲಿಕ್ ಮಾಡಿ ಮತ್ತು ಅರ್ಜಿಯನ್ನು ಭರ್ತಿ ಮಾಡಿ


ನೇಮಕಾತಿಗೆ ಅಂತರ್ಜಾಲ ವ್ಯವಸ್ಥೆ ಸೆಪ್ಟೆಂಬರ್ 11ರಿಂದ ಅಕ್ಟೋಬರ್ 1ರ ವರೆಗೆ ತೆರೆದಿರುತ್ತದೆ.


ಕೊನೇ ದಿನ: 1/10/2021 before 5.00 PM


Link: https://www.isro.gov.in/careers

Ads on article

Advertise in articles 1

advertising articles 2

Advertise under the article