Job in Udupi Court - SSLC ಪಾಸಾದವರಿಗೆ ಉಡುಪಿ ನ್ಯಾಯಾಲಯದಲ್ಲಿ ಉದ್ಯೋಗ- ಕನಿಷ್ಟ 27650/- ವೇತನ- Last Date 30/09/2021
ಉಡುಪಿ ನ್ಯಾಯಾಲಯದಲ್ಲಿ ಖಾಲಿ ಇರುವ ಸ್ಟೆನೋ (ಶೀಘ್ರ ಲಿಪಿ ಮತ್ತು ಬೆರಳಚ್ಚು) ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆ ಪಾಸ್ ಆದವರು ಈ ಹುದ್ದೆಗೆ ಅರ್ಜಿ ಹಾಕಲು ಅರ್ಹರಾಗಿರುತ್ತಾರೆ.
ಜೊತೆಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಹಿರಿಯ ದರ್ಜೆ ಕನ್ನಡ ಮತ್ತು ಆಂಗ್ಲ ಭಾಷೆಗಳ ಶೀಘ್ರ ಲಿಪಿ ಮತ್ತು ಬೆರಳಚ್ಚು ಪರೀಕ್ಷೆಗಳಲ್ಲಿ ಪಾಸ್ ಆಗಿರಬೇಕು.
ಹುದ್ದೆಯ ಹೆಸರು: ಸ್ಟೆನೋ (ಶೀಘ್ರ ಲಿಪಿಕಾರ)
ವೇತನ ಶ್ರೇಣಿ: 27,650/- ರಿಂದ 52650/- (ವಿವಿಧ ಭತ್ಯೆಗಳ ಸಹಿತ)
ವಯೋಮಿತಿ- ಕನಿಷ್ಟ 18 ರಿಂದ ಗರಿಷ್ಟ 35 ವಯಸ್ಸು
ನೇಮಕಾತಿ ವಿಧಾನ: ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ... ಬಳಿಕ ಸಂದರ್ಶನ ಮೂಲಕ ನೇಮಕಾತಿ
ಉದ್ಯೋಗದ ಸ್ಥಳ: ಉಡುಪಿ ನ್ಯಾಯಾಲಯ
ಅರ್ಜಿ ಸಲ್ಲಿಕೆಯ ವಿಧಾನ- ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸತಕ್ಕದ್ದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30/09/2021
ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
https://recruitmenthck.kar.nic.in/district/udu/stg/home.php
Carefully follow all the instruction before apply for the job