190 Jobs in Bank- ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 190 ಹುದ್ದೆ: ಅರ್ಜಿಗೆ ಸೆಪ್ಟಂಬರ್ 19ಕ್ಕೆ ಕೊನೇ ದಿನ
ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಖಾಲಿ ಇರುವ 190 ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಸೆಪ್ಟಂಬರ್ 19, 2021 ಅರ್ಜಿ ಸಲ್ಲಿಸಲು ಕಡೇ ದಿನವಾಗಿದೆ.
ಕಾನೂನು ಅಧಿಕಾರಿ, ಭದ್ರತಾ ಅಧಿಕಾರಿ ಸೇರಿದಂತೆ ಒಟ್ಟು 190 ಹುದ್ದೆಗಳನ್ನು ಬ್ಯಾಂಕ್ ಆಫ್ ಮಹಾರಾಷ್ಟ್ರ ಭರ್ತಿ ಮಾಡಿಕೊಳ್ಳಲು ನಿರ್ಧರಿಸಿದೆ.
ಆಯ್ಕೆಯಾದ ಅರ್ಜಿದಾರರಿಗೆ 36000/-- 69810/- ಮಾಸಿಕ ವೇತನ ನೀಡಲಾಗುತ್ತದೆ.
ಶೈಕ್ಷಣಿಕ ಅರ್ಹತೆ: ಸರ್ಕಾರಿ ಯಾ ಸರ್ಕಾರದಿಂದ ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಯಿಂದ ಪದವಿ ಯಾ ಸ್ನಾತಕೋತ್ತರ ಪದವಿ
ವಯೋಮಾನ: ಕನಿಷ್ಟ 20 ವರ್ಷದಿಂದ ಗರಿಷ್ಟ 35 ವರ್ಷ (ನಿಯಮಗಳಿಗೆ ಅನುಸಾರ ರಿಯಾಯಿತಿ ಸಡಿಲಿಕೆ ಇದೆ)
ಅರ್ಜಿ ಸಲ್ಲಿಸಲು ಸೂಕ್ತ ಶುಲ್ಕದೊಂದಿಗೆ ಸಲ್ಲಿಸಬೇಕು. ಆನ್‌ಲೈನ್ ಮೂಲಕ ಪರೀಕ್ಷೆ ಮತ್ತು ಆ ನಂತರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಈ ಮೇಲಿನ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತರು ಬ್ಯಾಂಕ್ ಆಫ್ ಮಹಾರಾಷ್ಟ್ರದ ಅಧಿಕೃತ ವೆಬ್‌ಸೈಟ್ ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ...
https://www.bankofmaharashtra.in/current_openings
ಅರ್ಜಿಗೆ: https://ibpsonline.ibps.in/bomrcpomay21/