Job in DK Zilla Panchayath - ಮಂಗಳೂರು: ಜಿ.ಪಂ.ನಲ್ಲಿ ಪದವೀಧರರಿಗೆ ಉದ್ಯೋಗ- ಅರ್ಜಿ ಸಲ್ಲಿಸಲು 10/10/2021 ಕೊನೆ ದಿನ
ಮಂಗಳೂರು: ಜಿ.ಪಂ.ನಲ್ಲಿ ಪದವೀಧರರಿಗೆ ಉದ್ಯೋಗ- ಅರ್ಜಿ ಸಲ್ಲಿಸಲು 10/10/2021 ಕೊನೆ ದಿನ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನಲ್ಲಿ ಪದವೀಧರರಿಗೆ ನೇಮಕಾತಿ ಆರಂಭವಾಗಿದೆ. ವಿವಿಧ ತಾಲೂಕು ಪಂಚಾಯತ್‌ಗಳಲ್ಲಿ ಇರುವ ಆರು ಹುದ್ದೆಗಳನ್ನು ತುಂಬಲು ಅರ್ಹ ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ.
ನೇರ ಅರ್ಜಿ ಸಲ್ಲಿಸಲು ಮಾತ್ರ ಅವಕಾಶ ಇದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 10ರಂದು ಕೊನೆ ದಿನಾಂಕವಾಗಿರುತ್ತದೆ.
ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ದಕ್ಷಿಣ ಕನ್ನಡದ ವಿವಿಧ ತಾಲೂಕು ಪಂಚಾಯತ್‌ಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ನೇಮಕಾತಿ ನಡೆಯುತ್ತಿದೆ.
ಹುದ್ದೆಯ ಹೆಸರು: ಆಡಳಿತಾತ್ಮಕ ಸಹಾಯಕ (Administrative Asistant)
ಶೈಕ್ಷಣಿಕ ಅರ್ಹತೆ: B.Com
ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಕಂಪ್ಯೂಟರ್ ಟೈಪಿಂಗ್‌ನಲ್ಲಿ ಪರಿಣತಿ ಹೊಂದಿರಬೇಕು
MS Word, Excel, Power Point presentation ಸಹಿತ ಕಂಪ್ಯೂಟರ್ ಜ್ಞಾನ ಹೊಂದಿರಬೇಕು
ಕನಿಷ್ಟ 2 ವರ್ಷಗಳ ಸಂಬಂಧಿತ ಅನುಭವ ಹೊಂದಿರಬೇಕು
ವಯೋಮಿತಿ: ಕನಿಷ್ಟ 21- ಗರಿಷ್ಟ 35 ವರ್ಷ
ವೇತನ: ರೂ. 14,543.60
ಒಟ್ಟು ಖಾಲಿ ಹುದ್ದೆಗಳು: 06
ಹುದ್ದೆಗಳ ನೇಮಕಾತಿ ಸ್ಥಳ: ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ, ಸುಳ್ಯ
ನೇಮಕಾತಿ ಕೇವಲ ಮೆರಿಟ್ ಲಿಸ್ಟ್‌ನ ಆಧಾರದಲ್ಲಿ ಮಾತ್ರ ನಡೆಯಲಿದೆ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು 10/10/2021ರಂದು ಕೊನೆ ದಿನವಾಗಿರುತ್ತದೆ.
ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಲಿಂಕ್ ಬಳಸಬಹುದು.
ಈ ಲಿಂಕ್ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು;