Job in ESIC, direct interview- ESIC- ನೌಕರರ ರಾಜ್ಯ ವಿಮಾ ನಿಗಮದಲ್ಲಿ ಉದ್ಯೋಗಾವಕಾಶ; ಸೆಪ್ಟೆಂಬರ್ 21, 2021ಕ್ಕೆ ಕೊನೆ ದಿನ
ESIC- ನೌಕರರ ರಾಜ್ಯ ವಿಮಾ ನಿಗಮದಲ್ಲಿ ಉದ್ಯೋಗಾವಕಾಶ; ಸೆಪ್ಟೆಂಬರ್ 21, 2021ಕ್ಕೆ ಕೊನೆ ದಿನ
ನೌಕರರ ರಾಜ್ಯ ವಿಮಾ ನಿಗಮ(ESIC) ಯಲ್ಲಿ ಉದ್ಯೋಗಾವಕಾಶ ತೆರೆದಿದೆ. ಆಸಕ್ತರು ಸೆಪ್ಟೆಂಬರ್ 21ರಂದು ನೇರ ಸಂದರ್ಶನಕ್ಕೆ ಪಾಲ್ಗೊಳ್ಳಬಹುದು.
ಒಟ್ಟು 14 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಈ ನೇರ ಸಂದರ್ಶನ ಆಯೋಜಿಸಲಾಗಿದೆ.
ಮಂಗಳೂರು, ಕಾರವಾರ, ದಾಂಡೇಲಿ, ಬೆಳಗಾವಿ, ತುಮಕೂರು, ಹುಬ್ಬಳ್ಳಿ, ಮೈಸೂರು, ಬೊಮ್ಮಸಂದ್ರ, ಚನ್ನಪಟ್ಟಣ, ಕಲಬುರ್ಗಿ, ನಂಜನಗೂಡು, ಶಹಾಬಾದ್, ತೋರಣಗಲ್ಲು ಕಚೇರಿಗಳಲ್ಲಿ ಮೆಡಿಕಲ್ ರೆಫ್ರಿ ಹುದ್ದೆಗಳ ಭರ್ತಿಗೆ ಈ ನೇಮಕಾತಿ ನಡೆಯುತ್ತಿದೆ.
ಇದೊಂದು ಅಲ್ಪಾವಧಿ (ಪಾರ್ಟ್ ಟೈಂ) ಹುದ್ದೆಯಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 20,000/- ರೂ. ವೇತನ ನಿಗದಿ ಮಾಡಲಾಗಿದೆ.
ರಾಜ್ಯ ವಿಮಾ ನಿಗಮ ಕರ್ನಾಟಕ ನೇಮಕಾತಿ ನಿಯಮಗಳ ಅನ್ವಯ ಅಭ್ಯರ್ಥಿಗಳಿಗೆ ವಯೋಮಿತಿ ನಿಗದಿಪಡಿಸಲಾಗಿದೆ.
ಸೆಪ್ಟೆಂಬರ್ 21ರಂದು ಬೆಳಿಗ್ಗೆ 10 ಗಂಟೆಗೆ ನೋಂದಣಿ ಆರಂಭವಾಗಲಿದೆ. 11 ಗಂಟೆಯಿಂದ ನೇರ ಸಂದರ್ಶನ ನಡೆಯಲಿದೆ.
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ esic.nic.in ಅಂತರ್ಜಾಲಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.