Job in Govt Project: ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆಯಲ್ಲಿ ನೇಮಕಾತಿ: ಅರ್ಜಿ ಸಲ್ಲಿಸಲು ಸೆಪ್ಟಂಬರ್ 27 ಕೊನೆ ದಿನ
ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ನೇಮಕಾತಿ ಆರಂಭವಾಗಿದೆ. ಇಲಾಖೆ ಗುತ್ತಿಗೆ ಆಧಾರದಲ್ಲಿ ಸಮಾಲೋಚಕರನ್ನು ನೇಮಿಸಲು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸುತ್ತಿದೆ. ಅರ್ಜಿಗಳನ್ನು ಸಲ್ಲಿಸಲು ಸೆಪ್ಟಂಬರ್ 27 ಅಂತಿಮ ದಿನವಾಗಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಡಿಯಲ್ಲಿ ಬರುವ ಜಲ್‌ಜೀವನ್ ಮಿಷನ್ ಹಾಗೂ ಸ್ವಚ್ ಭಾರತ್ ಮಿಷನ್ (ಗ್ರಾಮೀಣ) ಯೋಜನೆ ಅಡಿ ರಾಜ್ಯ ಕಚೇರಿ ಹಾಗೂ ಜಿಲ್ಲಾ ಪಂಚಾಯತ್‌ಗಳಲ್ಲಿ ಇರುವ ತಾತ್ಕಾಲಿಕ ಖಾಲಿ ಹುದ್ದೆಗಳಿಗೆ ಈ ನೇಮಕ ಮಾಡಲಾಗುತ್ತಿದೆ.
ಒಟ್ಟು 23 ಹುದ್ದೆಗಳು ಖಾಲಿ ಇದ್ದು, ವೆಬ್ ಸೈಟ್ ಮೂಲಕ ಅರ್ಜಿಗಳನ್ನು ಅಭ್ಯರ್ಥಿಗಳು ಪಡೆಯಬಹುದಾಗಿದೆ. ಇದನ್ನು ಡೌನ್‌ಲೋಡ್ ಮಾಡಿ ಅರ್ಜಿಯನ್ನು ತುಂಬಿ ಸಲ್ಲಿಸಬೇಕು.
ಸಹಾಯಕ ಸಮಾಲೋಚಕರು (ಕಾರ್ಯಕಾರಿ ಎಂಜಿನಿಯರ್ ದರ್ಜೆ) -1, ಯೋಜನಾ ವ್ಯವಸ್ಥಾಪಕರು -1, ಮೋನಿಟರಿಂಗ್ ಆಂಡ್ ಇವ್ಯಾಲ್ಯುವೇಶನ್ ಎಕ್ಸ್‌ಪರ್ಟ್ -1, ಎಂಎಚ್‌ಎಂ ಸಮಾಲೋಚಕರು -1, ಜಿಲ್ಲಾ ಯೋಜನಾ ವ್ಯವಸ್ಥಾಪಕರು -4, ಜಿಲ್ಲಾ ಎಂಇಎಸ್ ಸಮಾಲೋಚಕರು -2 ಸಹಿತ ವಿವಿಧ ಹುದ್ದೆಗಳಿಗೆ ಈ ನೇಮಕ ಪ್ರಕ್ರಿಯೆ ನಡೆಯುತ್ತಿದೆ.
ವಯೋಮಿತಿ:
ಸಹಾಯಕ ಸಮಾಲೋಚಕರು (ಕಾರ್ಯಕಾರಿ ಎಂಜಿನಿಯರ್ ದರ್ಜೆ) ಹುದ್ದೆಗೆ 62 ವರ್ಷ
ಎಂಚ್‌ಎಂ ಸಮಾಲೋಚಕರು ಹುದ್ದೆಗೆ 45
ಜಿಲ್ಲಾ ಎಂಇಎಸ್ ಸಮಾಲೋಕಚರು ಹುದ್ದೆಗೆ 45 ವರ್ಷಗಳು
ಉಳಿದ ಹುದ್ದೆಗೆ ನೇಮಕಾತಿ ನಿಯಮಗಳ ಅನ್ವಯ ವಯೋಮಿತಿ ಇದೆ.
ವೇತನ:
ಸಹಾಯಕ ಸಮಾಲೋಚಕರು (ಕಾರ್ಯಕಾರಿ ಎಂಜಿನಿಯರ್ ದರ್ಜೆ) ಹುದ್ದೆಗೆ 15,000-60,000 ರೂ.
ಯೋಜನಾ ವ್ಯವಸ್ಥಾಪಕರು ಹುದ್ದೆಗೆ 10,000ದಿಂದ 12,0000/-
ಮೋನಿಟರಿಂಗ್ ಆಂಡ್ ಇವ್ಯಾಲ್ಯುವೇಶನ್ ಎಕ್ಸ್‌ಪರ್ಟ್ ಹುದ್ದೆಗೆ 60 ರಿಂದ 75 ಸಾವಿರ
ಎಂಎಚ್‌ಎಂ ಸಮಾಲೋಚಕರು ಹುದ್ದೆಗೆ 50 ಸಾವಿರ ರೂ.
ಜಿಲ್ಲಾ ಯೋಜನಾ ವ್ಯವಸ್ಥಾಪಕರು ಹುದ್ದೆಗೆ 35 ರಿಂದ 45 ಸಾವಿರ ರೂ. ವೇತನ ನಿಗದಿ ಮಾಡಲಾಗಿದೆ.
ಈ ಮೇಲಿನ ಎಲ್ಲ ಹುದ್ದೆಗಳು ತಾತ್ಕಾಲಿಕ ಹುದ್ದೆಯಾಗಿದೆ. ಒಂದು ತಿಂಗಳ ನೋಟಿಸ್ ಅವಧಿ ಹಾಗೂ ಒಂದು ವರ್ಷದ ಅವಧಿಗೆ ಗುತ್ತಿಗೆ ಅಥವಾ ಹೊರಗುತ್ತಿಗೆಯ ಆಧಾರದಲ್ಲಿ ನೇಮಕ ಮಾಡಲಾಗುವುದು.
ಬಳಿಕ ಆಯಾ ಕಾಲಕ್ಕೆ ಅಭ್ಯರ್ಥಿಗಳ ನಿರ್ವಹಣೆ ಮತ್ತು ಕಾರ್ಯಕ್ಷಮತೆ ಪರಿಶೀಲಿಸಿ ಗುತ್ತಿಗೆಯನ್ನು ನವೀಕರಣ ಮಾಡಲಾಗುತ್ತದೆ.
ಅಭ್ಯರ್ಥಿಗಳ ನಿರ್ವಹಣೆ ತೃಪ್ತಿಕರ ಇಲ್ಲದಿದ್ದರೆ ಅಂತಹ ಅಭ್ಯರ್ಥಿಗಳ ಗುತ್ತಿಗೆ ಒಪ್ಪಂದವನ್ನು ಒಂದು ತಿಂಗಳ ನೋಟಿಸ್ ನೀಡಿ ರದ್ದುಪಡಿಸಬಹುದು.
ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯಲ್ಲಿ ಸೂಕ್ತ ಮಾಹಿತಿಯನ್ನು ತುಂಬಬೇಕು. ಶೈಕ್ಷಣಿಕ ವಿದ್ಯಾರ್ಹತೆ, ವಯಸ್ಸಿನ ದೃಢೀಕರಣ, ಅನುಭವ, ಪ್ರಮುಖ ಜೊತೆಗೆ ಈ ಹುದ್ದೆಗೆ ತಾನು ಹೇಗೆ ಸೂಕ್ತ ಎಂಬುದನ್ನು ಟಿಪ್ಪಣಿ ಮೂಲಕ ಬರೆದು ಅರ್ಜಿ ಜೊತೆಗೆ ಇಡಬೇಕು.
27-9-2021ರ ಸಂಜೆ 5.30ರ ನಂತರ ಸಲ್ಲಿಸಲಾಗುವ ಯಾವುದೇ ಅರ್ಜಿಯನ್ನು ಪರಿಗಣಿಸುವುದಿಲ್ಲ. ದೂರ ಶಿಕ್ಷಣ ಮುಖಾಂತರ ಸ್ನಾತಕ- ಸ್ನಾತಕೋತ್ತರ ಪದವಿ ಪಡೆದಿದ್ದರೆ ಅದಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ.
ಇಲಾಖೆ ಅಥವಾ ಹೊರಗುತ್ತಿಗೆ ಸಂಸ್ಥೆಯೊಂದಿಗೆ ನೇಮಕವಾದ ಅಭ್ಯರ್ಥಿ ನಿಗದಿತ ನಮೂನೆಯಲ್ಲಿ ಕರಾರು ಒಪ್ಪಂದ ಮಾಡಿಕೊಳ್ಳಬೇಕು. ಅವರ ಅನುಭವದ ಆಧಾರದಲ್ಲಿ ಮಾಸಿಕ ಸಮಾಲೋಚನಾ ಶುಲ್ಕ ನಿಗದಿಯಾಗುತ್ತದೆ. ಪಡಿಸಲಾಗುವುದು.
ರಾಜ್ಯ ಕಚೇರಿ ಅಥವಾ ಸಂಬಂಧಪಟ್ಟ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ವಿಡಿಯೋ ಸಂವಾದ ನಡೆಸಲಾಗುತ್ತದೆ. ನಿಗದಿತ ದಿನಾಂಕ ಮತ್ತು ಸಮಯದಲ್ಲಿ ಸಂದರ್ಶನಕ್ಕೆ ಮತ್ತು ನಿಗದಿತ ಪರೀಕ್ಷೆಗೆ ಹಾಜರಾಗುವುದು.