-->
Translators job in High Court- ಪದವೀಧರರಿಗೆ ನ್ಯಾಯಾಲಯದಲ್ಲಿ ಉದ್ಯೋಗಾವಕಾಶ: ರೂ. 44900/- ಮಾಸಿಕ ವೇತನ

Translators job in High Court- ಪದವೀಧರರಿಗೆ ನ್ಯಾಯಾಲಯದಲ್ಲಿ ಉದ್ಯೋಗಾವಕಾಶ: ರೂ. 44900/- ಮಾಸಿಕ ವೇತನ




ಕನ್ನಡ ಮಾಧ್ಯಮದಲ್ಲಿ ಒಂದು ಭಾಷೆಯಾಗಿ ಪದವಿ ಪಡೆದವರಿಗೆ ನ್ಯಾಯಾಲಯದಲ್ಲಿ ವೃತ್ತಿಜೀವನ ಆರಂಭಿಸುವ ಉತ್ತಮ ಅವಕಾಶ ಲಭಿಸಿದೆ. ರಾಜ್ಯ ಹೈಕೋರ್ಟ್‌ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.


ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಖಾಲಿ ಇರುವ ಭಾಷಾಂತರಕಾರರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ನ್ಯಾಯಾಲಯದಲ್ಲಿ ವೃತ್ತಿ ಜೀವನ ಆರಂಭಿಸಲು ಕನ್ನಡ ಮಾಧ್ಯಮದ ಪದವೀಧರರಿಗೆ ಇದೊಂದು ಉತ್ತಮ ಅವಕಾಶವಾಗಿರುತ್ತದೆ.


ಅಭ್ಯರ್ಥಿಗಳು ಪದವಿಯಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡಿರಬೇಕು ಹಾಗೂ ಶೇ 50 ಅಂಕ ಗಳಿಸಿರಬೇಕು. ಅದೇ ರೀತಿ, ಇಂಗ್ಲಿಷ್ ಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಕನಿಷ್ಠ ದ್ವಿತೀಯ ದರ್ಜೆಯೊಂದಿಗೆ ಪಡೆದಿರಬೇಕು.


ಅಭ್ಯರ್ಥಿಗಳನ್ನು ಲಿಖಿತ ಹಾಗೂ ಮೌಖಿಕ ಸಂದರ್ಶನದ ಮೂಲಕ ಆಯ್ಕೆ ನಡೆಯಲಿದ್ದು, ಪರೀಕ್ಷೆಯಲ್ಲಿ ಗಳಿಸಿದ ಅಂಕ ಹಾಗೂ ಮೀಸಲಾತಿ ಆಧಾರದಲ್ಲಿ 1-10 ರ ಅನುಪಾತದಲ್ಲಿ ಅರ್ಹ ಅಭ್ಯರ್ಥಿಗಳನ್ನು ಮೌಖಿಕ ಸಂದರ್ಶನಕ್ಕೆ ಕರೆಯಲಾಗುತ್ತದೆ.


ವೇತನ:

ಆಯ್ಕೆಯಾದ ಅಭ್ಯರ್ಥಿಗಳ ವೇತನ ಶ್ರೇಣಿ 44,900- 1,42,400 ವರೆಗೆ ಇರಲಿದೆ.

ವಯೋಮಿತಿ

ಕನಿಷ್ಠ 18 ರಿಂದ 35 ವರ್ಷ (ಮೀಸಲು ಅನುಸಾರ ವಯೋಮಿತಿ ಸಡಿಲಿಕೆ ಇದೆ)


ಅರ್ಜಿ ಸಲ್ಲಿಸಲು 2021ರ ಅಕ್ಟೋಬರ್ 16 ಕಡೆಯ ದಿನಾಂಕವಾಗಿದೆ.


ಆನ್‌ಲೈನ್‌ ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಸಬೇಕಿದೆ.


ಹೆಚ್ಚಿನ ಮಾಹಿತಿಗೆ ಹೈಕೋರ್ಟ್‌ನ ಅಧಿಕೃತ ವೆಬ್‌ಸೈಟ್ ನೋಡಬಹುದು.

ಅದಕ್ಕಾಗಿ ಈ ಲಿಂಕ್ ಬಳಸಬಹುದು

https://karnatakajudiciary.kar.nic.in/translators2021.php


For Notification:

https://karnatakajudiciary.kar.nic.in/recruitmentNotifications/trs2021/TRSNotification.pdf


Ads on article

Advertise in articles 1

advertising articles 2

Advertise under the article