-->
Job in Mangaluru Postal Dept- ಅಂಚೆ ಇಲಾಖೆಯಲ್ಲಿ ಏಜೆಂಟ್ ಹುದ್ದೆ: ಮಂಗಳೂರಿನಲ್ಲಿ ಕಾರ್ಯನಿರ್ವಹಿಸಲು ಅರ್ಜಿ

Job in Mangaluru Postal Dept- ಅಂಚೆ ಇಲಾಖೆಯಲ್ಲಿ ಏಜೆಂಟ್ ಹುದ್ದೆ: ಮಂಗಳೂರಿನಲ್ಲಿ ಕಾರ್ಯನಿರ್ವಹಿಸಲು ಅರ್ಜಿ

ಅಂಚೆ ಇಲಾಖೆಯಲ್ಲಿ ಉದ್ಯೋಗ: ಮಂಗಳೂರಿನಲ್ಲಿ ಕಾರ್ಯನಿರ್ವಹಿಸಲು ಅರ್ಜಿ





ಭಾರತೀಯ ಅಂಚೆ ಇಲಾಖೆಯ ವತಿಯಿಂದ ಮಂಗಳೂರು ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆಯ ಪ್ರತಿನಿಧಿಗಳಾಗಿ ಏಜೆಂಟ್ ನೆಲೆಯಲ್ಲಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿದೆ.


ತಮ್ಮ ಉದ್ಯೋಗ, ಉದ್ಯಮದ ಜೊತೆಗೆ ಉತ್ತಮ ಆದಾಯವನ್ನು ಗಳಿಸಲು ಇದೊಂದು ಸುವರ್ಣಾವಕಾಶವಾಗಿದೆ. ಉತ್ತಮ ಸಂವಹನ ಮೂಲಕ ಹಾಗೂ ತಮ್ಮ ಬಿಡುವಿನ ವೇಳೆಯಲ್ಲಿ ಅಥವಾ ಪೂರ್ಣಕಾಲಿಕವಾಗಿ ಇಲ್ಲಿ ಆದಾಯ ಗಳಿಸುವ ಸಾಧ್ಯತೆ ಇದೆ.


ಅಭ್ಯರ್ಥಿಯ ವಯೋಮಿತಿ: ಕನಿಷ್ಟ 18 ಹಾಗೂ ಗರಿಷ್ಟ 50 ವರ್ಷ


ಕನಿಷ್ಟ ವಿದ್ಯಾರ್ಹತೆ: SSLC


ವೇತನ: ಆಕರ್ಷಕ ಕಮಿಷನ್, ಇನ್ಸೆಂಟಿವ್ಸ್, ಕಾರ್ಯನಿರ್ವಣೆಗೆ ತಕ್ಕಂತೆ ಉತ್ತಮ ಪ್ರತಿಫಲ


ಇವರೂ ಅರ್ಜಿ ಸಲ್ಲಿಸಬಹುದು:

ಉದ್ಯೋಗಿಗಳು, ಸ್ವ-ಉದ್ಯೋಗಿಗಳು, ಇತರ ವಿಮೆ ಕಂಪೆನಿಗಳ ಮಾಜಿ ಪ್ರತಿನಿಧಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತರು, ನಿವೃತ್ತ ಶಿಕ್ಷಕರು ಹಾಗೂ ಇತರ ಆಸಕ್ತ ಅಭ್ಯರ್ಥಿಗಳು


ಆಸಕ್ತರು ತಮ್ಮ ಸಂಪೂರ್ಣ ವಿವರ ಇರುವ ಅರ್ಜಿ ಹಾಗೂ ದಾಖಲೆಗಳನ್ನು ಗೂಗಲ್ ಫಾರ್ಮ್ ಲಿಂಕ್ ಮೂಲಕ ಸಲ್ಲಿಸಬಹುದು.


ಅರ್ಜಿ ಸಲ್ಲಿಸುವ ಗೂಗಲ್ ಫಾರ್ಮ್ ಲಿಂಕ್: http://bit.ly/3iPV3ts


ಅರ್ಜಿ ಸಲ್ಲಿಸಲು ಕೊನೇ ದಿನಾಂಕ : 7/10/2021


ಕಮಿಷನ್, ಆದಾಯದ ಮಾಹಿತಿಗೆ ಈ ಲಿಂಕ್ ಒತ್ತಿ: http://bit.ly/3udWeqm



ಅಂಚೆ ಇಲಾಖೆಯ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆಯ ಬಗ್ಗೆ ಹೆಚ್ಚಿನ ಮಾಹಿತಿಗೆ ಅಂತರ್ಜಾಲ ಲಿಂಕ್ ಇಲ್ಲಿದೆ: www.indiapost.gov.in


ಇನ್ನಷ್ಟು ಮಾಹಿತಿಗೆ ಬಲ್ಮಠದಲ್ಲಿ ಇರುವ ಅಂಚೆ ಇಲಾಖೆಯ ವಿಭಾಗೀಯ ಕಚೇರಿಯಲ್ಲಿ ಮುಖ್ಯಸ್ಥರನ್ನು ಭೇಟಿ ಮಾಡಬಹುದು.


Ads on article

Advertise in articles 1

advertising articles 2

Advertise under the article