ಅಪ್ಪ ವಿರೋಧಿ ಪಾರ್ಟಿಯಲ್ಲಿದ್ದಾರೆ ಎಂದು ಬಾಲಕನ್ನು ಕೊಂದ ತಾಲಿಬಾನಿಗಳು!
Tuesday, September 28, 2021
ಅಫ್ಘಾನಿಸ್ತಾನ
: ತಂದೆ ವಿರೋಧಿ ಪಾರ್ಟಿಯಲ್ಲಿ ಇದ್ದಾರ
ಎಂದು ಬಾಲಕನನ್ನು ತಾಲಿಬಾನಿಗಳು ಹತ್ಯೆ ಮಾಡಿದ ಬಗ್ಗೆ ವರದಿಯಾಗಿದೆ
ತಂದೆ
ತಾಲಿಬಾನ್ ಪ್ರತಿರೋಧ ಪಡೆಯಲ್ಲಿ ಸೇರಿರುವ
ಕಾರಣಕ್ಕೆ ಬಾಲಕನನ್ನು ತಾಲಿಬಾನಿಗಳು ಕೊಂದಿದ್ದಾರೆ. ಈ ಮೂಲಕ ತಾಲಿಬಾನಿಗಳು ಮತ್ತೊಂದು ಕ್ರೂರತೆ ಮೆರೆದಿದ್ದಾರೆ.
ಅಪ್ಘಾನಿಸ್ತಾನದ
ತಖ್ಹಾರ್ ಪ್ರಾಂತ್ಯದಲ್ಲಿ
ಈ ಕ್ರೂರ
ಘಟನೆ ನಡೆದಿದೆ. ತಾಲಿಬಾನಿಗಳ ಕ್ರೂರ ವರ್ತನೆಯ ಬಗ್ಗೆ
ವರದಿ ಮಾಡುವ ಪಂಜ್ಶೀರ್ ಅಬ್ಸರ್ವರ್
ಟ್ವೀಟ್ನಲ್ಲಿ ಈ ಮಾಹಿತಿ ಹೊರಬಿದ್ದಿದೆ
ಬಾಲಕ ತಂದೆ ತಾಲಿಬಾನ್ ಪ್ರತಿರೋಧ ಪಡೆಯಲ್ಲಿಸೇರ್ಪಡೆಯಾಗಿರುವುದರಿಂದ
ಬಾಲಕನ್ನು ತಾಲಿಬಾನಿಗಳು ಹತ್ಯೆ ಮಾಡಿದ್ದಾರೆ ಎಂದು ಟ್ವೀಟ್ನಲ್ಲಿ ಹೇಳಲಾಗಿದೆ.
ತಾಲಿಬಾನ್
ಪಡೆಯು ಅಪ್ಘಾನಿಸ್ಥಾನವನ್ನು ವಶಕ್ಕೆ ಪಡೆದ ನಂತರ ಜಗತ್ತಿನ ವಿಶ್ವಾಸ ಗಳಿಸುವ ಪ್ರಯತ್ನವನ್ನು ಮಾಡುತ್ತಿರುವ ನಡುವೆ ಈ ಕ್ರೂರತೆ
ಮೆರೆದಿದೆ.