ಅನುಶ್ರೀ ವಿರುದ್ಧ ಡ್ರಗ್ಸ್ ಆರೋಪ ನಾನು ಮಾಡಿಲ್ಲ, ಚಾರ್ಜ್ ಶೀಟ್ ನಲ್ಲಿರೋದು ಸುಳ್ಳು: ಕಿಶೋರ್ ಅಮನ್ ಶೆಟ್ಟಿ
ಮಂಗಳೂರು:
ನಿರೂಪಕಿ ಅನುಶ್ರೀ ವಿರುದ್ಧ ಡ್ರಗ್ಸ್ ಆರೋಪದ ಹೇಳಿಕೆಯನ್ನು ನಾನು ನೀಡಿಲ್ಲ. ಚಾರ್ಜ್ ಶೀಟ್ ನಲ್ಲಿರೋದು ಸುಳ್ಳು. ಅವರ ವಿರುದ್ಧ ನಾನು ನಾನು ಈ ರೀತಿಯ ಹೇಳಿಕೆ
ನೀಡಿಯೇ ಇಲ್ಲ ಎಂದು ಡ್ರಗ್ಸ್ ಆರೋಪ ಎದುರಿಸುತ್ತಿರುವ ಕಿಶೋರ್ ಅಮನ್ ಶೆಟ್ಟಿ ಇಂದು ಮಂಗಳೂರಿನಲ್ಲಿ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ.
2009ರ
'ಕುಣಿಯೋಣ ಬಾರಾ' ಡ್ಯಾನ್ಸ್ ಕಾರ್ಯಕ್ರಮದ ಸಂದರ್ಭ ಪರಿಚಯ ಆಗಿತ್ತು. ಅದರ ನಂತರ ನನಗೂ
ಆಕೆಗೂ ಯಾವುದೇ ರೀತಿಯ ಸಂಪರ್ಕವಿಲ್ಲ. ಅವರಿಗೆ ನೃತ್ಯಕ್ಕೆ ನಿರ್ದೇಶನ ಮಾಡುರೋದು ಅದೇ ಮೊದಲು ಹಾಗೂ ಅದೇ ಕೊನೆ. ಆ ಬಳಿಕ ನಾನು
4-5 ವರ್ಷಗಳ ಹಿಂದೆ ಮಂಗಳೂರಿನಲ್ಲಿ ಡ್ಯಾನ್ಸ್ ಕ್ಲಾಸ್ ಕಾರ್ಯಕ್ರಮವೊಂದರಲ್ಲಿ ನಾವು ಭೇಟಿಯಾಗಿದ್ದೆವು. ಬಳಿಕ ನಾವಿಬ್ಬರು ಎಲ್ಲೂ ಭೇಟಿಯಾಗಿಲ್ಲ. ನಮ್ಮಿಬ್ಬರ ನಡುವೆ ಫೋನ್ ಸಂಪರ್ಕವೂ ಇಲ್ಲ. ಅವರ ಮೊಬೈಲ್ ಫೋನ್ ಸಂಖ್ಯೆಯೂ ನನ್ನಲ್ಲಿ ಇಲ್ಲ ಎಂದರು.
ಅನುಶ್ರೀಯವರೊಂದಿಗೆ
ನಾನು ಬೇರಾವ ಸಂಬಂಧವನ್ನು ಇರಿಸಿಕೊಂಡಿಲ್ಲ. ಅನುಶ್ರೀ ತುಂಬಾ ಕಷ್ಟಪಟ್ಟು ಮೇಲೆ ಬಂದಿದ್ದಾರೆ. ಅವರ ಬಗ್ಗೆ ನನಗೆ ತುಂಬಾ ಗೌರವ ಇದೆ. ಆದರೆ ಈ ರೀತಿ ಯಾರು
ಮಾಡುತ್ತಿದ್ದಾರೆ ಗೊತ್ತಿಲ್ಲ. ನನಗೆ ಒಳ್ಳೆಯ ಕೊರಿಯೋಗ್ರಾಫರ್ ಆಗಬೇಕೆಂಬ ಕನಸಿದೆ. ನಾನು ಪಾರ್ಟಿಗೆ ಹೋಗುತ್ತೇನೆ ವಿನಃ ಡ್ರಗ್ಸ್ ಪಾರ್ಟಿಗೆ ಯಾವತ್ತೈ ಹೋಗಿಲ್ಲ. ಆದರೆ ಎರಡು ಬಾರಿ ಡ್ರಗ್ಸ್ ಸೇವನೆ ಮಾಡಿದ್ದೆ. ಆದರೆ ಪೆಡ್ಲಿಂಗ್ ಮಾಡಿಲ್ಲ ಎಂದು ಕಿಶೋರ್ ಶೆಟ್ಟಿ ಹೇಳಿದರು.
ಇದನ್ನು ಓದಿ: ಅನುಶ್ರೀ ವಿರುದ್ಧ ತಾನು ಹೇಳಿಕೆ ನೀಡಿಲ್ಲವೆಂದು ಕಿಶೋರ್ ಶೆಟ್ಟಿ ನ್ಯಾಯಾಲಯದ ಮುಂದೆ ಹೇಳಲಿ: ಶಶಿಕುಮಾರ್ ಎನ್.