Alvas Kshama appointed- ಆಳ್ವಾಸ್ ಪ್ರಾಂಶುಪಾಲೆ ಪ್ರೊ. ಕ್ಷಮಾ ರಾಜೀವ್ ಗಾಂಧಿ ವಿವಿ ಅಧ್ಯಯನ ಮಂಡಳಿಗೆ ಆಯ್ಕೆ
Wednesday, September 15, 2021
ಆಳ್ವಾಸ್ ಪ್ರಾಂಶುಪಾಲೆ ಪ್ರೊ. ಕ್ಷಮಾ ರಾಜೀವ್ ಗಾಂಧಿ ವಿವಿ ಅಧ್ಯಯನ ಮಂಡಳಿಗೆ ಆಯ್ಕೆ
ಮೂಡುಬಿದಿರೆ: ಕರ್ನಾಟಕದ ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಫಿಸಿಯೋಥೆರಪಿ (ಪಿಜಿ) ವಿಭಾಗದ ಅಧ್ಯಯನ ಮಂಡಳಿಯ ಸದಸ್ಯೆಯಾಗಿ ಆಳ್ವಾಸ್ ಪಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲೆ ಪ್ರೋ ಕ್ಷಮಾ ಸುಶೀಲ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ವಿಶ್ವವಿದ್ಯಾಲಯದ 163 ನೇ ಸಿಂಡಿಕೇಟ್ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಪ್ರೊ. ಕ್ಷಮಾ ಅವರು ಮುಂದಿನ ಮೂರು ವರ್ಷಗಳ ಕಾಲ ಈ ಅಧ್ಯಯನ ಮಂಡಳಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ವಿವಿಯ ಪ್ರಕಟಣೆ ತಿಳಿಸಿದೆ.