-->
Lok Adalath in Mangaluru-  ಸೆಪ್ಟೆಂಬರ್ 30ರಂದು ಲೋಕ್ ಅದಾಲತ್: ಕೇಸ್‌ಗಳ ಇತ್ಯರ್ಥಕ್ಕೆ ಅವಕಾಶ

Lok Adalath in Mangaluru- ಸೆಪ್ಟೆಂಬರ್ 30ರಂದು ಲೋಕ್ ಅದಾಲತ್: ಕೇಸ್‌ಗಳ ಇತ್ಯರ್ಥಕ್ಕೆ ಅವಕಾಶ



ಮಂಗಳೂರು: ಇದೇ ಸೆಪ್ಟೆಂಬರ್ 30ರಂದು ಜಿಲ್ಲೆಯಾದ್ಯಂತ ಲೋಕ್ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.



ಈ ಲೋಕ್ ಅದಾಲತ್‍ನಲ್ಲಿ ರಾಜಿ ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥ ಪಡಿಸಲಾಗುತ್ತಿದೆ.

ಕಳೆದ ಆಗಸ್ಟ್ 14ರಂದು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮೆಗಾ ಲೋಕ್ ಅದಾಲತ್‍ನಲ್ಲಿ 11,192 ಅರ್ಹ ಪ್ರಕರಣಗಳ ಪೈಕಿ 5,310 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.



ಎನ್‍ಐ ಕಾಯ್ದೆಯಡಿ 211 ಪ್ರಕರಣಗಳನ್ನು ಇತ್ಯರ್ಥಪಡಿಸಿ 3,57,06,682 ರೂ.ಗಳ ಪರಿಹಾರ ಮೊತ್ತವನ್ನು ವಿತರಿಸಲಾಗಿದೆ. ಅದೇ ರೀತಿ ಮೋಟಾರು ವಾಹನ ಅಪಘಾತ ಪ್ರಕರಣಗಳಲ್ಲಿ 329 ಪ್ರಕರಣಗಳನ್ನು ಇತ್ಯರ್ಥಪಡಿಸಿ 8,96,57,166 ರೂ. ಮೊತ್ತಗಳ ಪರಿಹಾರವನ್ನು ಸಂಬಂಧಿಸಿದವರಿಗೆ ವಿತರಿಸಲಾಗಿದೆ.



138 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿ 94,37,090 ರೂ. ಗಳ ದಂಡವನ್ನು ಬ್ಯಾಂಕ್‌ಗಳಿಗೆ ಸಂಬಂಧಿಸಿದವರಿಂದ ಪಾವತಿಸಲಾಗಿದೆ.



ಜಿಲ್ಲೆಯಲ್ಲಿ ಪರಸ್ಪರ ರಾಜಿ ಸಂದಾನದ ಮೂಲಕ ಇತ್ಯರ್ಥಪಡಿಸಲು ಅರ್ಹವಿರುವ ಪ್ರಕರಣಗಳಲ್ಲಿ ಇದೇ ಸೆಪ್ಟೆಂಬರ್ 30 ರಂದು ಹಮ್ಮಿಕೊಳ್ಳಲಾಗಿರುವ ಲೋಕ್ ಅದಾಲತ್‍ನಲ್ಲಿ ಭಾಗವಹಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಜಿಲ್ಲಾ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೂ ಆದ ಶ್ರೀ ಪೃಥ್ವಿರಾಜ್ ವರ್ಣೇಕರ್ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article