ಅಪಘಾತದಲ್ಲಿ ಮೃತಪಟ್ಟ ಪ್ರಿಯಕರ: ಮನನೊಂದು ನೇಣಿಗೆ ಕೊರಳೊಡ್ಡಿದ ಪ್ರೇಯಸಿ...!
Friday, September 17, 2021
ಚಾಮರಾಜನಗರ: ಪ್ರಿಯಕರ ಅಪಘಾತದಲ್ಲಿ ಮೃತಪಟ್ಟ ವಿಚಾರ ತಿಳಿದು ಪ್ರೇಯಸಿ ನೇಣಿಗೆ ಕೊರಳೊಡ್ಡಿ ಮೃತಪಟ್ಟ ಘಟನೆ ಚಾಮರಾಜನಗರ ತಾಲೂಕಿನ ಬಂಡಿಗೆರೆ ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ ತಾಲೂಕಿನ ಬಂಡಿಗೆರೆ ಗ್ರಾಮದ ಪೂಜಾ(19) ಆತ್ಮಹತ್ಯೆ ಮಾಡಿಕೊಂಡಾಕೆ.
ಚಾಮರಾಜನಗರ ತಾಲೂಕಿನ ಚಂದುಕಟ್ಟೆಮೋಳೆ ಗ್ರಾಮದ ಮಹೇಶ್(23) ಹಾಗೂ ಪೂಜಾ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಬುಧವಾರ ರಾತ್ರಿ ಅಪಘಾತದಲ್ಲಿ ಮಹೇಶ್ ಮೃತಪಟ್ಟಿದ್ದನು. ಈ ವಿಚಾರ ತಿಳಿದು ಮನನೊಂದಿದ್ದ ಆಕೆ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ.
ಯುವತಿಯ ಆತ್ಮಹತ್ಯೆಯ ಮಾಹಿತಿ ತಿಳಿದ ಬಳಿಕ ಇವರ ಸ್ನೇಹಿತರ ಗುಂಪು ಮರುಗುತ್ತಿದ್ದಾರೆ. ಅಲ್ಲದೆ ಇವರಿಬ್ಬರನ್ನು ಸಾಮಾಜಿಕ ಜಾಲತಾಣಗಳಲ್ಲಿ "ರೋಮಿಯೋ-ಜೂಲಿಯೆಟ್" ಗೆ ಹೋಲಿಸಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಈ ಘಟನೆಯ ಸಂಬಂಧ ಯಾವುದೇ ದೂರು, ಪ್ರಕರಣ ದಾಖಲಾಗಿಲ್ಲ.