606 jobs in SBI including Manager- SBIನಲ್ಲಿ ಮ್ಯಾನೇಜರ್ ಸಹಿತ 606 ಹುದ್ದೆ: ಅರ್ಜಿ ಸಲ್ಲಿಸಲು 18/10/2021 ಕೊನೆ ದಿನ
SBIನಲ್ಲಿ ಮ್ಯಾನೇಜರ್ ಸಹಿತ 606 ಹುದ್ದೆ: ಅರ್ಜಿ ಸಲ್ಲಿಸಲು 18/10/2021 ಕೊನೆ ದಿನ
ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಒಟ್ಟು 606 ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಜಿಗಳ ನೋಂದಣಿ ಪ್ರಕ್ರಿಯೆ ಸೆಪ್ಟಂಬರ್ 28, 2021ರಿಂದ ಆರಂಭವಾಗಿದ್ದು, ಅಕ್ಟೋಬರ್ 18, 2021ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಹುದ್ದೆಗಳ ವಿವರ ಹೀಗಿದೆ.
ಎಕ್ಸಿಕ್ಯೂಟಿವ್ - 1 ಹುದ್ದೆ
ರಿಲೇಶನ್‌ಶಿಪ್ ಮ್ಯಾನೇಜರ್ 314 ಹುದ್ದೆಗಳು
ರಿಲೇಶನ್‌ಶಿಪ್ ಮ್ಯಾನೇಜರ್(Team Leader)- 20 ಹುದ್ದೆಗಳು
ಕಸ್ಟಮರ್ ರಿಲೇಶನ್‌ಶಿಪ್ ಎಕ್ಸಿಕ್ಯೂಟಿವ್ - 217 ಹುದ್ದೆಗಳು
ಇನ್‌ವೆಸ್ಟ್‌ಮೆಂಟ್ ಆಫೀಸರ್ - 12 ಹುದ್ದೆಗಳು
ಸೆಂಟ್ರಲ್ ರಿಸರ್ಚ್ ಟೀಂ(Product Leader) -2 ಹುದ್ದೆಗಳು
ಸೆಂಟ್ರಲ್ ರಿಸರ್ಚ್ ಟೀಂ (Support) -2 ಹುದ್ದೆಗಳು
ಮ್ಯಾನೇಜರ್ (Marketing) -2 ಹುದ್ದೆಗಳು
ಡೆಪ್ಯೂಟಿ ಮ್ಯಾನೇಜರ್ (Marketing) - 26 ಹುದ್ದೆಗಳು
ಅರ್ಜಿ ಶುಲ್ಕ:
ಎಲ್ಲ ಹುದ್ದೆಗಳಿಗೆ ಅರ್ಜಿ ಶುಲ್ಕಗಳು ಮತ್ತು ಮಾಹಿತಿ ಶುಲ್ಕಗಳು ರೂ. 750/- (ಸಾಮಾನ್ಯ,ಇತರೆ ಹಿಂದುಳಿದ ವರ್ಗಗಳು ಸೇರಿ)
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಅರ್ಜಿ ಪಾವತಿ ಮತ್ತು ಮಾಹಿತಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಗೇಟ್ ವೇ ಮೂಲಕ ಶುಲ್ಕ ಪಾವತಿಯನ್ನು ಆನ್‌ಲೈನ್‌ನಲ್ಲಿ ಮಾಡಬಹುದು. ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ ಇಂಟರ್‌ನೆಟ್ ಬ್ಯಾಂಕಿಂಗ್ ಇತ್ಯಾದಿಗಳನ್ನು ಬಳಸಿಕೊಂಡು ಪಾವತಿ ಮಾಡಬಹುದು.
ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಲಿಂಕ್‌ಗಳನ್ನು ಬಳಸಿ
ಎಕ್ಸಿಕ್ಯೂಟಿವ್ ಹುದ್ದೆಗೆ-
ಮ್ಯಾನೇಜರ್ ಹುದ್ದೆಗೆ -
ಇತರ ಹುದ್ದೆಗಳಿಗೆ -