-->
Sexual harassment in Kadaba - ಕಡಬದ ಯುವತಿಯರಿಗೆ ವಯನಾಡ್ ನಿವಾಸಿಯ ಲೈಂಗಿಕ ಕಿರುಕುಳ: ಚಿಕಿತ್ಸಾಲಯ ಹೆಸರಲ್ಲಿ ಅಕ್ರಮ ದಂಧೆ?

Sexual harassment in Kadaba - ಕಡಬದ ಯುವತಿಯರಿಗೆ ವಯನಾಡ್ ನಿವಾಸಿಯ ಲೈಂಗಿಕ ಕಿರುಕುಳ: ಚಿಕಿತ್ಸಾಲಯ ಹೆಸರಲ್ಲಿ ಅಕ್ರಮ ದಂಧೆ?



ಮಂಗಳೂರು: ಮಸಾಜ್ ಪಾರ್ಲರ್ ಮಾಲಕರೊಬ್ಬರು ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ದಕ್ಷಿಣ ಕನ್ನಡದಲ್ಲಿ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮಸಾಜ್ ಪಾರ್ಲರ್ ಮಾಲೀಕ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಈತ ಕೇರಳದ ವಯನಾಡ್ ಮೂಲದ ನಿವಾಸಿ ಎನ್ನಲಾಗಿದೆ.




ಮಸಾಜ್ ಪಾರ್ಲರ್ ಮಾಲೀಕ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಯುವತಿ ಕಡಬ ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಡಬ ಸಮೀಪದ  ಕಳಾರ ಸಮೀಪ ಸ್ನೇಹಾ ಆಯುರ್ವೇದಿಕ್ ಪಂಚಕರ್ಮ ಚಿಕಿತ್ಸಾಲಯ ಎಂಬ ಹೆಸರಿನಲ್ಲಿ ಮಸಾಜ್ ಸೆಂಟರ್ ನಡೆಯುತ್ತಿದೆ. ಇದನ್ನು ಕೇರಳದ ವಯನಾಡ್ ನಿವಾಸಿಯೋರ್ವರು ನಡೆಸುತ್ತಿದ್ದಾರೆ. 

ಇಲ್ಲಿಗೆ ಬರುವ ಯುವತಿಯರಿಗೆ ಈತ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪವಿದೆ. ಚಿಕಿತ್ಸಾಲಯಕ್ಕೆ ಆಗಮಿಸಿದ ಈ ಯುವತಿಗೆ ಮತ್ತೆ ಕಿರುಕುಳ ನೀಡಲು ಆರಂಭಿಸಿದ್ದು, ನೊಂದ ಯುವತಿ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಯನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.

Ads on article

Advertise in articles 1

advertising articles 2

Advertise under the article