-->
Spa Restrictions- ಇನ್ನು ಮುಂದೆ ಸ್ಪಾಗಳಲ್ಲಿ ಪುರುಷರಿಗೆ ಸ್ತ್ರೀಯರು, ಸ್ತ್ರೀಯರಿಗೆ ಪುರುಷರು ಮಸಾಜ್ ಮಾಡುವಂತಿಲ್ಲ: ಹೊಸ ಆದೇಶ ಜಾರಿ

Spa Restrictions- ಇನ್ನು ಮುಂದೆ ಸ್ಪಾಗಳಲ್ಲಿ ಪುರುಷರಿಗೆ ಸ್ತ್ರೀಯರು, ಸ್ತ್ರೀಯರಿಗೆ ಪುರುಷರು ಮಸಾಜ್ ಮಾಡುವಂತಿಲ್ಲ: ಹೊಸ ಆದೇಶ ಜಾರಿ

ನವದೆಹಲಿ: ಇನ್ನು ಮುಂದೆ ಸ್ಪಾ, ಮಸಾಜ್‌ ಸೆಂಟರ್‌ಗಳಲ್ಲಿ ಪುರುಷರಿಗೆ ಮಹಿಳೆಯರು, ಮಹಿಳೆಯರಿಗೆ ಪುರುಷರು ಮಸಾಜ್‌ ಮಾಡುವಂತಿಲ್ಲ ಎಂದು ದೆಹಲಿಯಲ್ಲಿ ಆದೇಶ ಹೊರಡಿಸಲಾಗಿದೆ.

ಸ್ಪಾ, ಮಸಾಜ್ ಸೆಂಟರ್​ಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು, ಇವುಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ರೀತಿಯ ಆದೇಶವನ್ನು ಜಾರಿಗೊಳಿಸಲಾಗಿದೆ. ಸ್ಪಾ, ಮಸಾಜ್ ಸೆಂಟರ್‌ಗಳಲ್ಲಿ ಸ್ಪಾ ಹೆಸರಿನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದ್ದು, ವೇಶ್ಯಾವಾಟಿಕೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್​ ಗವರ್ನರ್​​ ಅನಿಲ್​ ಬೈಜಾಲ್​​​ ಈ ಹೊಸ ಆದೇಶವನ್ನು ಜಾರಿಗೊಳಿಸಿದ್ದಾರೆ. 

ಸದ್ಯ ಪೂರ್ವ ದೆಹಲಿಯಲ್ಲಿ 70ಕ್ಕೂ ಹೆಚ್ಚು ಸ್ಪಾ ಕೇಂದ್ರಗಳು ಕಾರ್ಯಾಚರಿಸುತ್ತಿದ್ದು, ಅವುಗಳಲ್ಲಿ 41 ಕೇಂದ್ರಗಳು ಮಾತ್ರ ಪರವಾನಿಗೆ ಇದ್ದು ನಡೆಯುತ್ತಿವೆ. ಆದ್ದರಿಂದ ಈ ಆದೇಶದ ಅನ್ವಯ ಸ್ಪಾ, ಮಸಾಜ್ ಸೆಂಟರ್ ಗಳಲ್ಲಿ ಪುರುಷರಿಗೆ ಪುರುಷರು ಮಾತ್ರ ಹಾಗೂ ಮಹಿಳೆಗೆ ಮಹಿಳೆಯರೇ ಮಾತ್ರ ಮಸಾಜ್​ ಮಾಡಲು ಅವಕಾಶ ನೀಡಲಾಗಿದೆ. ಜೊತೆಗೆ, ಸ್ಪಾ ಕೇಂದ್ರಗಳಲ್ಲಿ ಗ್ರಾಹಕರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಪಿಪಿಇ ಕಿಟ್ ಧರಿಸಿ ಕೊರೊನಾ ನಿಮಯ ಪಾಲನೆ ಮಾಡಬೇಕು. ಮಾಸ್ಕ್​ ಧರಿಸಬೇಕೆಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.​

Ads on article

Advertise in articles 1

advertising articles 2

Advertise under the article