ಕೀಟಲೆ ಮಾಡಿದವನ ವಿರುದ್ಧ ರೊಚ್ಚಿಗೆದ್ದು ಹುಡುಕಾಟ ಮಾಡಿ ಮಾಡಿ ಕಚ್ಚಿದ ಕೋತಿ
Saturday, September 18, 2021
ಚಿಕ್ಕಮಗಳೂರು: ಕೀಟಲೆ ಮಾಡಿರುವವನ ವಿರುದ್ಧ ರೊಚ್ಚಿಗೆದ್ದ ಕೋತಿಯೊಂದು ಆತನನ್ನು ಹುಡುಕಾಡಿ ಹುಡುಕಾಡಿ ಕಚ್ಚಿ ಗಾಯಗೊಳಿಸಿರುವ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ.
ಈ ಕೋತಿಯು ಕೊಟ್ಟಿಗೆಹಾರದಲ್ಲಿರುವ ಮೊರಾರ್ಜಿ ದೇಸಾಯಿ ಹಾಸ್ಟೇಲ್‍ಗೆ ಬಂದು ಕುಳಿತಿತ್ತು. ಕೋತಿಯನ್ನು ನೋಡಿರುವ ಆಟೋ ಚಾಲಕ ಜಗದೀಶ್ ಎಂಬವರು ಕೀಟಲೆ ಮಾಡಿದ್ದಾರೆ. ಪರಿಣಾಮ ರೊಚ್ಚಿಗೆದ್ದ ಮಂಗ ಜಗದೀಶ್ ಅವರನ್ನು ಬೆನ್ನಟ್ಟಿ ಬೆನ್ನಟ್ಟಿ ಹಗೆ ತೀರಿಸಿ ಕೈಗೆ ಕಚ್ಚಿದೆ.
ಬೇರೆಯವರೊಂದಿಗೆ ತಲೆಯೇರಿ ಆಟವಾಡುತ್ತಿದ್ದ ಕೋತಿಯು ಅವರಿಗೆ ಏನೂ ಮಾಡದೆ ಕೀಟಲೆ ಮಾಡಿರುವ ಜಗದೀಶ್ ಬೆನ್ನತ್ತಿ ಹೋಗಿ ಹಗೆ ತೀರಿಸಿಕೊಂಡಿದೆ. ಕೋತಿಗೆ ಹೆದರಿ ಜಗದೀಶ್ ಆಟೋ, ಕಾರುಗಳಲ್ಲಿ ಅಡಗಿ ಕುಳಿತುಕೊಂಡರೂ ಹುಡುಕಿಗೊಂಡು ಬಂದ ಕೋತಿಯು ಅವರ ಆಟೋವನ್ನು ಪತ್ತೆ ಹಚ್ಚಿ, ಟಾಪ್ ಹರಿದು ಸೇಡು ತೀರಿಸಿಕೊಂಡಿದೆ. ಅಲ್ಲದೆ ಅವರಿಗೆ ಕಚ್ಚಿ ಹೋಗಿದೆ.