-->
ಮಂಗಳೂರಿನಲ್ಲಿ ಅನ್ಯಕೋಮಿನ ಜೋಡಿ ಎಂದು ನೈತಿಕ ಪೊಲೀಸ್ ಗಿರಿ- ವಿಡಿಯೋ ವೈರಲ್ ಆಗುತ್ತಿದ್ದಂತೆ ಐವರ ಬಂಧನ (VIDEO)

ಮಂಗಳೂರಿನಲ್ಲಿ ಅನ್ಯಕೋಮಿನ ಜೋಡಿ ಎಂದು ನೈತಿಕ ಪೊಲೀಸ್ ಗಿರಿ- ವಿಡಿಯೋ ವೈರಲ್ ಆಗುತ್ತಿದ್ದಂತೆ ಐವರ ಬಂಧನ (VIDEO)

ಮಂಗಳೂರು; ಮಂಗಳೂರಿನ ಸುರತ್ಕಲ್ ನಲ್ಲಿ ಆದಿತ್ಯವಾರ ಅನ್ಯಕೋಮಿನ ಜೋಡಿಯೆಂದು ಯುವಕರ ಗುಂಪೊಂದು ನೈತಿಕ ಪೊಲೀಸ್ ಗಿರಿ ಮೆರೆದಿದ್ದು , ವಿಡಿಯೋ ವೈರಲ್ ಆಗುತ್ತಿದ್ದಂತೆ ಐದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆದಿತ್ಯವಾರ ದಂದು ಮಂಗಳೂರಿನ ದೇರಳಕಟ್ಟೆಯ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಮಲ್ಪೆ‌ಬೀಚ್ ಗೆ ಪ್ರವಾಸಕ್ಕೆ ತೆರಳಿದ್ದರು.  ಅಲ್ಲಿಂದ ಪ್ರವಾಸ ಮುಗಿಸಿ ವಾಪಾಸು ಬರುವ ವೇಳೆ ಮಂಗಳೂರಿನ ಸುರತ್ಕಲ್ ನಲ್ಲಿ ಈ ಕಾರನ್ನು ಯುವಕರ ಗುಂಪೊಂದು ತಡೆದಿದೆ.ಕಾರಿನಲ್ಲಿ ಅನ್ಯಕೋಮಿನ ಜೋಡಿ ಪ್ರಯಾಣಿಸುತ್ತಿದ್ದರು ಎಂದು ತಂಡ ದಾಳಿ ಮಾಡಿದ್ದು ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಟ್ರಾಫಿಕ್ ಪೊಲೀಸ್ ಇನ್ಸ್ಪೆಕ್ಟರ್ ಹಲ್ಲೆ ಮಾಡುವುದನ್ನು ತಡೆಯಲು ಯತ್ನಿಸಿದ್ದಾರೆ. ಇದರ ವಿಡಿಯೋ ಇದೀಗ ವೈರಲ್ ಆಗಿದೆ.




ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Ads on article

Advertise in articles 1

advertising articles 2

Advertise under the article