MRPL ಚಿಮಿಣಿಯಿಂದ ದಟ್ಟ ಹೊಗೆ- ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು! ( VIDEO)
Wednesday, September 22, 2021
ಮಂಗಳೂರು: ಮಂಗಳೂರಿನ ಎಂ ಆರ್ ಪಿ ಎಲ್ ನ ಚಿಮಿಣಿಗಳಿಂದ ಸಂಜೆಯ ವೇಳೆಗೆ ಬೆಂಕಿಯೊಂದಿಗೆ ಕಾಣಿಸಿಕೊಂಡ ದಟ್ಟ ಹೊಗೆಗೆ ಸುತ್ತಮುತ್ತಲಿನ ಪ್ರದೇಶದ ಜನತೆ ಕಿರಿಕಿರಿಯನ್ನು ಅನುಭವಿಸಿದರು.
ಸಂಜೆಯ ವೇಳೆಗೆ ದಟ್ಟ ಹೊಗೆ ಆಕಾಶದಲ್ಲಿ ಕಾಣಿಸಿಕೊಂಡಿದ್ದು ಇದು ಎಂ ಆರ್ ಪಿ ಎಲ್ ಚಿಮಿಣಿಯಿಂದ ಹೊರಬಂದ ಹೊಗೆಯಾಗಿತ್ತು. ಎಂ ಆರ್ ಪಿ ಎಲ್ ನ ಮೂರನೇ ಹಂತದ ಚಿಮಿಣಿಯಿಂದ ಈ ಹೊಗೆ ಕಾಣಿಸಿಕೊಂಡಿದ್ದು ಸ್ಥಳೀಯ ರು ಇದರಿಂದ ಆಕ್ರೋಶಗೊಂಡಿದ್ದರು.
ಹೆಚ್ಚಾಗಿ ರಾತ್ರಿ ಇದೇ ರೀತಿ ಚಿಮಿಣಿಯಿಂದ ದಟ್ಟ ಹೊಗೆ ಹೊರಬಿಡಲಾಗುತ್ತದೆ ಎಂಬ ಆರೋಪ ಕೇಳಿ ಬರುತ್ತಿದೆ.ಇದೇ ವೇಳೆ ಸ್ಥಳೀಯ ರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆಯು ನಡೆದಿದೆ.