ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಹತ್ಯೆ ಮಾಡಿದ ಪತ್ನಿ: ರಾಸಾಯನಿಕ ಸ್ಪೋಟಗೊಂಡು ಕೃತ್ಯ ಬಯಲು
Wednesday, September 22, 2021
ಪಾಟ್ನಾ: ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆಗೈದು ಆತನ ಮೃತದೇಹವನ್ನು ರಾಸಾಯನಿಕ ಹಾಕಿ ನಾಶಮಾಡಲು ಯತ್ನಿಸಿರುವ ಘಟನೆ ಬಿಹಾರ ರಾಜ್ಯದ ಮುಜಾಫರ್ ನ ಸಿಕಂದರ್ ಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಸಾಯನಿಕವು ಸ್ಪೋಟಗೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ರಾಕೇಶ್ (30) ತನ್ನ ಪತ್ನಿ ರಾಧಾಳಿಂದಲೇ ಹತ್ಯೆಗೊಳಗಾದ ದುರ್ದೈವಿ. ರಾಕೇಶ್ ಪತ್ನಿ ರಾಧಾ, ಆಕೆಯ ಪ್ರಿಯಕರ ಸುಭಾಷ್, ರಾಧಾ ಸಹೋದರಿ ಕೃಷ್ಣಾ, ಮತ್ತು ಆಕೆಯ ಪತಿ ಕೊಲೆಗೈದ ಆರೋಪಿಉ
ಮೃತ ರಾಕೇಶ್ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದ. ಪರಿಣಾಮ ಆತನ ಮೇಲೆ ಪೊಲೀಸರಿಗೆ ಕಣ್ಣಿತ್ತು. ಹೀಗಾಗಿ ಆತ ಪತ್ನಿ ಓರ್ವಳನ್ನೇ ಮನೆಯಲ್ಲಿ ಬಿಟ್ಟು ಬೇರೆ ಕಡೆ ರಹಸ್ಯವಾಗಿ ನೆಲೆಸಿದ್ದ. ಆತನ ಗೆಳೆಯ ಸುಭಾಷ್ ರಾಧಾಳನ್ನು ನೋಡಿಕೊಳ್ಳುತ್ತಿದ್ದ. ಈ ವೇಳೆ ರಾಧಾ ಮತ್ತು ಸುಭಾಷ್ ನಡುವೆ ಪ್ರೀತಿ ಮೊಳಕೆಯೊಡೆದಿತ್ತು. ಇದಕ್ಕೆ ರಾಧಾ ಸಹೋದರಿ ಕೃಷ್ಣಾ ಮತ್ತು ಆಕೆಯ ಗಂಡನ ಸಹಕಾರವೂ ದೊರೆದಿತ್ತು. ತಮ್ಮ ದಾರಿಗೆ ಪತಿ ರಾಕೇಶ್ ಅಡ್ಡವಾಗುತ್ತಾನೆಂದು ಆತನ ಹತ್ಯೆಗೆ ಎಲ್ಲರೂ ಸೇರಿ ಸಂಚು ರೂಪಿಸಿದ್ದರು.
ತೀಜ್ ಹಬ್ಬದ ಸಂದರ್ಭ ಪತಿಯನ್ನು ಉಪಾಯವಾಗಿ ಮನೆಗೆ ಕರೆದ ರಾಧಾ, ಪ್ರಿಯಕರ ಸುಭಾಷ್ ಜೊತೆ ಸೇರಿ ಆತನ ಹತ್ಯೆ ಮಾಡಿದ್ದಳು. ಮೃತದೇಹವನ್ನು ಸುಭಾಷ್ ಹಲವಾರು ತುಂಡುಗಳಾಗಿ ಕತ್ತರಿಸಿದ್ದಾನೆ. ಸುಭಾಷ್ ಮತ್ತು ರಾಧಾ ತಮ್ಮ ಬಾಡಿಗೆ ಫ್ಲಾಟ್ ನೊಳಗೆ ಮೃತದೇಹವನ್ನು ವಾಸನೆ ಬಾರದಂತೆ ತಡೆಯಲು ರಾಸಾಯನಿಕ ಹಾಕಲು ಯತ್ನಿಸಿದ್ದಾರೆ. ಆದರೆ ಈ ಸಂದರ್ಭ ರಾಸಾಯನಿಕ ಸ್ಪೋಟಗೊಂಡಿದೆ. ಪರಿಣಾಮ ಸ್ಥಳೀಯ ನಿವಾಸಿಗಳಿಗೆ ವಿಚಾರ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಫ್ಯಾಟ್ ಗೆ ಬಂದು ನೋಡಿದಾಗ ಸ್ಪೋಟದ ಪರಿಣಾಮ ಮೃತದೇಹ ತುಂಡುಗಳು ಚದುರಿದ್ದವು. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು ಮತ್ತು ವಿಧಿವಿಜ್ಞಾನ ತಂಡವು ಈ ಬಗ್ಗೆ ತನಿಖೆ ಪ್ರಾರಂಭಿಸಿದೆ.
ರಾಕೇಶ್ ಸಹೋದರ ದಿನೇಶ್ ಈ ಬಗ್ಗೆ ಪೊಲೀಸ್ ದೂರು ನೀಡಿ, ರಾಧಾ, ಆಕೆಯ ಪ್ರಿಯಕರ ಸುಭಾಷ್, ಸಹೋದರಿ ಕೃಷ್ಣಾ ಹಾಗೂ ಪತಿಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ತನ್ನ ಸಹೋದರನ ಪತ್ನಿ ರಾಧಾಗೆ ಸುಭಾಷ್ ಜೊತೆ ಅಕ್ರಮ ಸಂಬಂಧ ಇತ್ತು ಎಂದು ದಿನೇಶ್ ಆರೋಪಿಸಿದ್ದಾರೆ.