ಲೈಂಗಿಕ ಕಿರುಕುಳ ನೀಡಿದ ತಂದೆಯನ್ನು ಕೊಲೆ ಮಾಡಿದ ಮಗಳು!
Saturday, September 25, 2021
ಚೆನ್ನೈ; ಲೈಂಗಿಕ ಕಿರುಕುಳ ನೀಡುತ್ತಿದ್ದ ತಂದೆಯನ್ನು ಪುತ್ರಿಯೆ ಕೊಲೆ ಮಾಡಿದ ಘಟನೆ ತಮಿಳುನಾಡು ರಾಜ್ಯದ ವಿಲ್ಲುಪುರಂ ಜಿಲ್ಲೆಯ ಕೋವಿಲ್ಸುರೈಯೂರ್‌ನಲ್ಲಿ ನಡೆದಿದೆ .
ತಂದೆ ಲೈಂಗಿಕ ಕಿರುಕುಳ ನೀಡಿದ್ದರಿಂದ ಆತ್ಮರಕ್ಷಣೆಗಾಗಿ ತಂದೆಯನ್ನು ಹತ್ಯೆ ಮಾಡಿರುವುದಾಗಿ ಯುವತಿ ತಪ್ಪೊಪ್ಪಿಕೊಂಡಿದ್ದಾಳೆ .
ಇಲ್ಲಿನ ವೆಂಕಟೇಶನ್ ( 40 ) ಹತ್ಯೆಯಾದ ವ್ಯಕ್ತಿ . ಈತನ ಪತ್ನಿ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದಳು . ಆ ಬಳಿಕ ವೆಂಕಟೇಶನ್ ತನ್ನಿಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದನು. ವೆಂಕಟೇಶನ್ ಹಿರಿಯ ಮಗಳು ಚೆನ್ನೈನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು . ಎರಡನೇ ಮಗಳು ಅವಳೂರಿನ ಕಾಲೇಜ್‌ನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು . ಮನೆಯಲ್ಲಿದ್ದ ಮಗಳಿಗೆ ವೆಂಕಟೇಶನ್ ಲೈಂಗಿಕ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತು ಆಕೆ ತಂದೆಯನ್ನು ಕೊಲೆ ಮಾಡಿದ್ದಾಳೆ . ಬಾಲಕಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಲೈಂಗಿಕ ಕಿರುಕುಳ ನೀಡುತ್ತಿದ್ದ ವೇಳೆ ಆತ್ಮರಕ್ಷಣೆಗಾಗಿ ತಂದೆಯನ್ನು ಕೊಲೆಗೈದಿರುವುದಾಗಿ ಹೇಳಿಕೊಂಡಿದ್ದಾಳೆ .