ತಾಯಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಳ್ಳುತ್ತೇನೆ ಎಂದಾತನ ಕೊಚ್ಚಿ ಕೊಲೆಗೈದ ಯುವಕ
Monday, September 27, 2021
ತುಮಕೂರು: ಹೆಂಡತಿ ನನ್ನನ್ನು ತೊರೆದಿದ್ದಾಳೆ, ನಿನ್ನ ತಾಯಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಳ್ಳುತ್ತೇನೆ ಎಂದು ಮದ್ಯಪಾರ್ಟಿ ಮಾಡುತ್ತಿದ್ದಾಗ ಹೇಳಿದ ಗೆಳೆಯನನ್ನು ಯುವಕನೋರ್ವ ಕೊಲೆ ಮಾಡಿದ ಘಟನೆ ಗುಬ್ಬಿ ತಾಲೂಕಿನ ಕಸಬಾ ಹೋಬಳಿ ಮುದಿಗೆರೆ ಗ್ರಾಮದಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕು ಕಸಬಾ ಹೋಬಳಿ ಮುದಿಗೆರೆ ಗ್ರಾಮದ ನಿವಾಸಿ ರಾಜಣ್ಣ(55 )ಕೊಲೆಯಾದಾತ. ಅದೇ ಗ್ರಾಮದ ನಿವಾಸಿ ಮಹೇಶ್ ಕೊಲೆಗೈದ ಆರೋಪಿ.
ರಾಜಣ್ಣ ಎಂಬಾತ ಎರಡು ವರ್ಷಗಳಿಂದ ಹೆಂಡತಿಯಿಂದ ದೂರವಾಗಿ ಜೀವನ ನಡೆಸುತ್ತಿದ್ದ. ಈತನಿಗೆ ಅದೇ ಗ್ರಾಮದ ನಿವಾಸಿ ಮಹೇಶ್ ಎಂಬುವನ ಜೊತೆ ಗೆಳೆತನವಿತ್ತು. ಕಳೆದ ಭಾನುವಾರ ರಾತ್ರಿ ಇಬ್ಬರೂ ಜೊತೆಯಾಗಿ ಮದ್ಯ ಸೇವಿಸುತ್ತಿದ್ದರು. ಆ ವೇಳೆ ರಾಜಣ್ಣ ಮಹೇಶನೊಂದಿಗೆ, 'ನನ್ನನ್ನು ನನ್ನ ಹೆಂಡತಿ ತೊರೆದಿದ್ದು, ನಾನು ನಿನ್ನ ತಾಯಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಳ್ಳುತ್ತೇನೆ. ದಯವಿಟ್ಟು ನನಗೆ ಸಹಕರಿಸು’ ಎಂದಿದ್ದಾನೆ.
ಇದರಿಂದ ರೊಚ್ಚಿಗೆದ್ದ ಮಹೇಶನು, ರಾಜಣ್ಣನೊಂದಿಗೆ ಜಗಳಕ್ಕಿಳಿದಿದ್ದಾನೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಮರ ಕಡಿಯುವ ಕೊಡಲಿಯಿಂದ ಮಹೇಶ ರಾಜಣ್ಣನನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.
ಸದ್ಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಕುಮಾರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.