ಸಿದ್ದರಾಮಯ್ಯ ಓರ್ವ ಭಯೋತ್ಪಾದಕ- ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿವಾದಾತ್ಮಕ ಹೇಳಿಕೆ (Video)
ಮಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ
ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸಿದ್ದರಾಮಯ್ಯ ಓರ್ವ ಭಯೋತ್ಪಾದಕ ಎಂದು
ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಆರ್ ಎಸ್ ಎಸ್ ತಾಲಿಬಾನ್ ನಂತೆ ಎಂದ ಸಿದ್ದರಾಮಯ್ಯ ಅವರದು ತಾಲಿಬಾನ್ ಸಂಸ್ಕೃತಿ. ಅವರು ಮುಖ್ಯಮಂತ್ರಿಗಳಾದ ಸಂದರ್ಭದಲ್ಲಿ ರಾಜ್ಯದಲ್ಲಿ 24 ಮಂದಿಯ ಹಿಂದೂ ಕಾರ್ಯಕರ್ತರ ಹತ್ಯೆಗಳು ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯವರಾದ ದೀಪಕ್ ರಾವ್, ಶರತ್ ಮಡಿವಾಳ, ಪ್ರಶಾಂತ್ ಪೂಜಾರಿ , ಕೊಡಗುವಿನ ಕುಟ್ಟಪ್ಪ ಸೇರಿದಂತೆ 24 ಮಂದಿ ಹಿಂದೂ ಕಾರ್ಯಕರ್ತರ ಹತ್ಯೆಗಳಾಗಿದೆ.
ಸುಳ್ಯದ ಕಾಲೆಜಿಗೆ ಹೋಗುವ ವಿದ್ಯಾರ್ಥಿನಿಯ
ಹತ್ಯೆನಡೆದಿರುವುದು, ಎಟಿಎಂ ನ ಒಳಗೆ ಹೋದ ಮಹಿಳೆಯ ಹತ್ಯೆ ಮಾಡಿರುವುದು ಮೊದಲಾದ ಘಟನೆಗಳು ನಡೆದಿದೆ. ಇದುವೆ ಸಿದ್ದರಾಮಯ್ಯ ಅವರ
ತಾಲಿಬಾನ್ ಸಂಸ್ಕೃತಿಯಾಗಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದ ಅವಧಿಯಲ್ಲಿ ಅತೀ ಹೆಚ್ಚು ಕೊಲೆಗಳಾಗಿದ್ದು ನಿತ್ಯ ಗೋಹತ್ಯೆಯು ನಡೆಯುತ್ತಿತ್ತು. ಅವರಿಗೆ ನೈತಿಕತೆ ಇಲ್ಲ
ಎಂದು ಹೇಳಿದರು.