-->
ಮಂಗಳೂರು: ನಿಫಾ ಎಂದು ಬಂದಿದ್ದ ಯುವಕನ ವರದಿ ನೆಗೆಟಿವ್-  ಆತನ ಭಯಕ್ಕೆ ಕಾರಣ ಏನು ಗೊತ್ತಾ?

ಮಂಗಳೂರು: ನಿಫಾ ಎಂದು ಬಂದಿದ್ದ ಯುವಕನ ವರದಿ ನೆಗೆಟಿವ್- ಆತನ ಭಯಕ್ಕೆ ಕಾರಣ ಏನು ಗೊತ್ತಾ?

 


 

ಮಂಗಳೂರು:  ಕೇರಳದಲ್ಲಿ ಭಾರಿ ಆತಂಕವನ್ನು ಸೃಷ್ಟಿಸಿದ ನಿಫಾ ವೈರಸ್ ಎರಡು ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯ ಜನರನ್ನು ಭೀತಿ ಮೂಡುವಂತೆ ಮಾಡಿತ್ತು.  ಕಾರವಾರ ಮೂಲದ ಯುವಕನೊಬ್ಬ ತನಗೆ ನಿಫಾ ವೈರಸ್ ಇದೆ ಎಂಬ ಆತಂಕದಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದು ಈ ಆತಂಕಕ್ಕೆ ಕಾರಣವಾಗಿತ್ತು. ಆದರೆ ಆತನ ಪರೀಕ್ಷೆ ನಡೆಸಿದಾಗ ಅವನಿಗೆ ವರದಿ ನೆಗೆಟಿವ್ ಬಂದಿದ್ದು ಆತಂಕ ದೂರವಾಗಿದೆ

 

ಏನಾಗಿತ್ತು ಯುವಕನಿಗೆ? ಆತನ ಭಯಕ್ಕೆ ಕಾರಣವೇನು?

 

ಈ ಯುವಕ ಮೂಲತ ಕಾರವಾರದವ. ಈತ ಗೋವಾದಲ್ಲಿ  ಮೈಕ್ರೋ ಬಯಾಲಜಿಸ್ಟ್ ಆಗಿ ಕರ್ತವ್ಯ ಮಾಡುತ್ತಿದ್ದಾನೆ. ಈತನ ಸಂಸ್ಥೆ ಈ ಹಿಂದೆ ಕೊರೊನಾ ಪರೀಕ್ಷೆ ನಡೆಸುವ ಆರ್ ಟಿ ಪಿ ಸಿ ಆರ್ ಟೆಸ್ಟ್ ನಡೆಸುವ ಕಿಟ್ ತಯಾರಿಸುತ್ತಿ್ತ್ತು. ಇದೀಗ ನಿಫಾ ವೈರಸ್             ಟೆಸ್ಟ್ ಮಾಡುವ ಕಿಟ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಸಕ್ರಿಯ ವೈರಸ್ ಜೊತೆಗೆ ಕರ್ತವ್ಯ ನಿರ್ವಹಿಸಬೇಕಿತ್ತು. ಆದರೆ ಅದಕ್ಕಾಗಿ ಸುರಕ್ಷೆಯನ್ನು ಕೈಗೊಂಡು ಕರ್ತವ್ಯ ನಿರ್ವಹಿಸಬೇಕಾಗಿದೆ. ಇದೇ ರೀತಿ ಸುರಕ್ಷೆಯೊಂದಿಗೆ ಈತನು ಕೆಲಸ ಮಾಡಿದ್ದಾನೆ.

 

ಈತ ಇತ್ತೀಚೆಗೆ ಕಾರವಾರಕ್ಕೆ ಬಂದಿದ್ದು ಈ ವೇಳೆ ಆತನಿಗೆ ಜ್ವರ ಕಾಣಿಸಿಕೊಂಡಿತ್ತು. ಮಳೆಯ ಕಾರಣಕ್ಕೆ ನೆನೆದು ಬಂದ ಜ್ವರವನ್ನು ಈತ ನಿಫಾ ಇರಬಹುದೆಂದು ಸಂಶಯಿಸತೊಡಗಿದೆ. ತಾನು ಕೆಲಸ ಮಾಡುವ ಸ್ಥಳದಲ್ಲಿ ನಿಫಾ ವೈರಸ್ ಜೀವಾಣು ಇದ್ದ ಕಾರಣಕ್ಕೆ ಈತನಿಗೆ ತನಗೆ  ನಿಫಾ ಬಂದಿರಬಹುದೆಂಬ ಶಂಕೆ ಮೂಡಿದೆ. ಈ ಭಯದಲ್ಲಿ ಇದ್ದ ಆತ ಮಂಗಳುರಿಗೆ ಬಂದು ತನೆಗೆ ನಿಫಾ ಪರೀಕ್ಷೆ ಮಾಡುವಂತೆ ವಿನಂತಿಸಿದ್ದ.

 

ಈತನಿಗೆ ನಿಫಾ ವೈರಸ್ ನ ಗುಣಲಕ್ಷಣ ಇಲ್ಲದಿದ್ದರೂ ದಕ್ಷಿಣ ಕನ್ನಡ ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡದೆ ಆತನ ಮಾದರಿಯನ್ನು ಬೆಂಗಳೂರು ಮೂಲಕ ಪುಣೆಗೆ ರವಾನಿಸಿ ಪರೀಕ್ಷೆ ಮಾಡಿಸಿದೆ. ಆತನ ರಿಪೋರ್ಟ್ ಬರುವವರೆಗೆ ಆತನನ್ನು ಐಸೋಲೇಸನ್ ನಲ್ಲಿ ಇಡಲಾಗಿದೆ. ಮತ್ತು ಆತನ ಸಂಪರ್ಕದ ಬಗ್ಗೆ ಮಾಹಿತಿಯು ಕಲೆ ಹಾಕಿದೆ. ಇಂದು ಮುಂಜಾನೆ ಆತನ ಪರೀಕ್ಷೆಯ ರಿಪೋರ್ಟ್  ಕೈಸೇರಿದ್ದು ಆತನಿಗೆ ನಿಫಾ ವೈರಸ್ ಇಲ್ಲ ಎಂದು  ವರದಿಯಲ್ಲಿದೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಮೂಡಿದ ಆತಂಕ ದೂರವಾಗಿದೆ

Ads on article

Advertise in articles 1

advertising articles 2

Advertise under the article