-->
No Weekend Curfew in DK - ಭಾರೀ ವಿರೋಧಕ್ಕೆ ತಲೆಬಾಗಿದ ಜಿಲ್ಲಾಡಳಿತ: ಈ ಬಾರಿ ಇಲ್ಲ ವಾರಾಂತ್ಯ ಕರ್ಫ್ಯೂ

No Weekend Curfew in DK - ಭಾರೀ ವಿರೋಧಕ್ಕೆ ತಲೆಬಾಗಿದ ಜಿಲ್ಲಾಡಳಿತ: ಈ ಬಾರಿ ಇಲ್ಲ ವಾರಾಂತ್ಯ ಕರ್ಫ್ಯೂ



ಕರ್ಫ್ಯೂವನ್ನು ಜಿಲ್ಲಾಡಳಿತ ಹಿಂದಕ್ಕೆ ಪಡೆದುಕೊಂಡಿದೆ. ಲಾಕ್‌ಡೌನ್‌ ಹೇರಿದ ಬಳಿಕ ಕೊರೋನಾ ಸೋಂಕು ನೆಪದಲ್ಲಿ ಜನರ ದೈನಂದಿನ ಚಟುವಟಿಕೆಗೆ ಅಡ್ಡಿಯಾಗುವಂತಹ ಆದೇಶಗಳನ್ನು ಹೊರಡಿಡುತ್ತಿತ್ತು. ಕೊರೋನಾ ನಿಯಂತ್ರಿಸಲು ಇದು ಅಗತ್ಯ ಎಂಬ ವಾದವನ್ನು ಅದು ಮುಂದಿರಿಸುತ್ತಿತ್ತು. ಇದರಿಂದ ಜನರೂ ಮರುಮಾತನಾಡದೆ ಅದನ್ನು ಪಾಲಿಸುತ್ತಿದ್ದರು.



ಆದರೆ, ಕೊರೋನಾ ನಿಯಂತ್ರಿಸುವಲ್ಲಿ ಜಿಲ್ಲಾಡಳಿತದ ತಪ್ಪು, ಅಧಿಕಾರಿಗಳ ವೈಫಲ್ಯಕ್ಕೆ ಜನರನ್ನು ತಪ್ಪಿತಸ್ತರನ್ನಾಗಿ ಮಾಡುವಂತೆ ಮಾಡಲಾಗುತ್ತಿದೆ ಎಂಬ ಭಾವನೆ ಜನರಲ್ಲಿ ಮೂಡಿದೆ.



ಕೆಲವು ಸಂಘಟನೆಗಳು, ರಾಜಕೀಯ ಪಕ್ಷಗಳು, ವರ್ತಕರ ಸಂಘಟನೆಗಳು ನೇರವಾಗಿ ಪತ್ರಿಕಾ ಹೇಳಿಕೆ ಮೂಲಕ ಜಿಲ್ಲಾಡಳಿತದ ನಿರ್ಧಾರವನ್ನು ಖಂಡಿಸಿತ್ತು.



ಪುತ್ತೂರಿನ ವರ್ತಕರ ಸಂಘದ ನಾಯಕರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೇರವಾಗಿ ಜಿಲ್ಲಾಧಿಕಾರಿಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಈ ಬಾರಿಯೂ ವಾರಾಂತ್ಯ ಕರ್ಫ್ಯೂ ಹೇರಿದರೆ ಯಾವುದೇ ಬೆಲೆ ತೆತ್ತಾದರೂ ಅದನ್ನು ಉಲ್ಲಂಘಿಸುವುದಾಗಿ ಹೇಳಿದ್ದರು. ಆದಕ್ಕೆ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರು ಸಮಾಧಾನದಿಂದ ಉತ್ತರಿಸಿ ಕನಿಷ್ಟ ಈ ಬಾರಿ ಕಾಯುವಂತೆ ಮನವಿ ಮಾಡಿದ್ದರು. ಅವರು ಹೇಳಿದ್ದ ಪಾಯಸದ ಉಪಮೆ ವ್ಯಾಪಕ ಟ್ರೋಲ್‌ಗೂ ಕಾರಣವಾಗಿತ್ತು.



ಜಿಲ್ಲೆಯಲ್ಲಿ ಪಾಸಿಟಿವ್ ರೇಟ್ ಕಡಿಮೆ ಇರುವ ಕಾರಣದಿಂದ ವೀಕೆಂಡ್ ಕರ್ಫ್ಯೂ ಸಡಿಲಿಸುವುದಾಗಿ ಜಿಲ್ಲಾಡಳಿತ ಹೇಳಿದ್ದು, ರಾಜ್ಯ ಸರ್ಕಾರದ ಸೂಚನೆಯಂತೆ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿತ್ತು.



ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ರದ್ದುಗೊಂಡರೂ ನೈಟ್ ಕರ್ಫ್ಯೂ ಎಂದಿನಂತೆ ಜಾರಿಯಲ್ಲಿ ಇರುತ್ತದೆ. ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆಯ ವರೆಗೆ ಕರ್ಫ್ಯೂ ಜಾರಿಯಲ್ಲಿ ಇರುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.

Ads on article

Advertise in articles 1

advertising articles 2

Advertise under the article